Friday, July 30, 2021
Homeಸುದ್ದಿ ಜಾಲರಾಜ್ಯಾದ್ಯಂತ ಬಕ್ರೀದ್ ಆಚರಣೆ..

ಇದೀಗ ಬಂದ ಸುದ್ದಿ

ರಾಜ್ಯಾದ್ಯಂತ ಬಕ್ರೀದ್ ಆಚರಣೆ..

ಮಂಗಳೂರು: ಇಂದು ರಾಜ್ಯಾದ್ಯಂತ ಬಕ್ರೀದ್ ಆಚರಿಸಲಾಗುತ್ತಿದ್ದು ಕಡಲನಗರಿ ಮಂಗಳೂರಿನಲ್ಲಿಯೂ ಮುಸ್ಲಿಮರು ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಮಸೀದಿಗಳಲ್ಲಿ ಬಕ್ರೀದ್ ಪ್ರಯುಕ್ತ ವಿಶೇಷ ಪ್ರಾರ್ಥನೆಯಲ್ಲಿ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದಾರೆ.

ಮಂಗಳೂರಿನ ಪ್ರಮುಖ ಮಸೀದಿಗಳಾದ ಉಳ್ಳಾಲ ದರ್ಗಾ, ಬಾವುಟ ಗುಡ್ಡೆಯ ಈದ್ಗಾ ಮಸೀದಿ,ಬಂದರ್​ನ ಝೀನತ್ ಬಕ್ಷ್ ಮಸೀದಿ ಮೊದಲಾದೆಡೆ ಮುಸ್ಲಿಂ ಬಾಂಧವರು ಪ್ರಾರ್ಥನೆ ನಡೆಸಿದ್ದಾರೆ.

ಬಕ್ರೀದ್ ಕುರಿತು ರಾಜ್ಯದ ಜನತೆಗೆ ಸಿಎಂ ಬಿಎಸ್​​ ಯಡಿಯೂರಪ್ಪ ಶುಭಹಾರೈಸಿದ್ದಾರೆ. ತ್ಯಾಗ, ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬ ಸರ್ವರಿಗೂ ಮಂಗಳ ತರಲಿ. ಪರಸ್ಪರ ಸಹೋದರತೆ, ಐಕ್ಯತೆಯನ್ನು ಇನ್ನಷ್ಟು ಬಲಪಡಿಸಲಿ. ಸಾಂಕ್ರಾಮಿಕದ ಕರಿಛಾಯೆ ದೂರಸರಿಯಲಿ ಎಂದು ಪ್ರಾರ್ಥಿಸೋಣ. ಸುರಕ್ಷಿತವಾಗಿ ಹಬ್ಬ ಆಚರಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ ಸಹ ಟ್ವೀಟ್ ಮಾಡಿದ್ದು, ನಾಡಿನ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು. ತ್ಯಾಗ ಬಲಿದಾನದ ಜೊತೆಗೆ ವಿಶ್ವ ಭ್ರಾತೃತ್ವ ಸಾರುವ ಹಬ್ಬವು ಎಲ್ಲೆಡೆ ಮತ್ತಷ್ಟು ಸ್ನೇಹ – ಸೌಹಾರ್ದತೆಯನ್ನು ಪಸರಿಸಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಟ್ವಿಟರ್ ಮೂಲಕ ಶುಭಕೋರಿದ್ದು, ಬಕ್ರೀದ್ ಹಬ್ಬದ ತ್ಯಾಗ, ಬಲಿದಾನದ ಸಂದೇಶ, ಜನತೆಯ ಕಷ್ಟಕಾರ್ಪಣ್ಯ, ನೋವು – ದುಃಖಗಳಿಗೆ ಸ್ಪಂದಿಸಲು ನಮಗೆಲ್ಲ ಸ್ಪೂರ್ತಿ ನೀಡಲಿ. ದುರಿತದ ಕಾಲವನ್ನು ಜೊತೆ ಜೊತೆಯಾಗಿ ಎದುರಿಸುವ ಸದ್ಭಾವನೆ ನಮ್ಮದಾಗಲಿ. ಮುಸ್ಲಿಮ್ ಬಂಧುಗಳೆಲ್ಲರಿಗೂ ಈದ್ ಮುಬಾರಕ್ ಎಂದು ಹಾರೈಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img