Friday, July 23, 2021
Homeಜಿಲ್ಲೆಬೆಂಗಳೂರುದಿಢೀರ್ ದೆಹಲಿಗೆ ತೆರಳಿದ ಸಚಿವ ಶ್ರೀರಾಮುಲು

ಇದೀಗ ಬಂದ ಸುದ್ದಿ

ದಿಢೀರ್ ದೆಹಲಿಗೆ ತೆರಳಿದ ಸಚಿವ ಶ್ರೀರಾಮುಲು

ಬೆಂಗಳೂರು: ದಿಢೀರ್ ಬೆಳವಣಿಗೆಯಲ್ಲಿ ಸಚಿವ ಬಿ.ಶ್ರೀರಾಮುಲು ನವದೆಹಲಿಗೆ ತೆರಳಿದ್ದು, ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ನಾಯಕತ್ವ ಬದಲಾವಣೆ ಚರ್ಚೆ ಸಮಯದಲ್ಲಿ ರಾಮುಲು ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.

ಕಳೆದ ರಾತ್ರಿ ಆಪ್ತರ ಜೊತೆ ಮಾತುಕತೆ ನಡೆಸಿದ್ದ ಸಚಿವ ಶ್ರೀರಾಮುಲು, ಬೆಳ್ಳಂಬೆಳಗ್ಗೆಯೇ ದೆಹಲಿಗೆ ತೆರಳಿದ್ದಾರೆ. ಈಗಾಗಲೇ ಜಗದೀಶ್ ಶೆಟ್ಟರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕೂಡ ದೆಹಲಿಗೆ ದೌಡಾಯಿಸಿದ್ದಾರೆ. ಇದರ ನಡುವೆ ಶ್ರೀರಾಮುಲು ತೆರಳಿರುವುದು ಅಚ್ಚರಿಗೆ ಕಾರಣವಾಗಿದೆ. ಇತ್ತ ಕಾವೇರಿಯಲ್ಲಿ ಸಿಎಂ ಯಡಿಯೂರಪ್ಪ ಮೌನವಾಗಿ ಕುಳಿತಿದ್ದರೆ, ಅತ್ತ ಆಪ್ತರೆಲ್ಲಾ ದೆಹಲಿಯತ್ತ ಮುಖ ಮಾಡುತ್ತಿದ್ದಾರೆ‌.

ಹೈಕಮಾಂಡ್ ನಾಯಕರ ಬುಲಾವ್ ಮೇರೆಗೆ ಶ್ರೀರಾಮುಲು ದೆಹಲಿಗೆ ತೆರಳಿದ್ದು, ಯಾವ ಉದ್ದೇಶಕ್ಕೆ ಅವರನ್ನ ಕರೆಸಿಕೊಳ್ಳಲಾಗಿದೆ. ಯಾವ ಮಾಹಿತಿ ಅವರಿಂದ ನಿರೀಕ್ಷೆ ಮಾಡಿದೆ ಎಂಬುದು ಬಹಿರಂಗವಾಗಿಲ್ಲ. ಪ್ರಮುಖ ಖಾತೆ ವಾಪಸ್ ಪಡೆದು ಸಮಾಜಕಲ್ಯಾಣ ಇಲಾಖೆ ಕೊಟ್ಟರೂ ಪಕ್ಷದ ವಿರುದ್ಧ ಮಾತನಾಡದೇ ಕೆಲಸ ಮಾಡಿಕೊಂಡು ಹೋಗಿದ್ದು, ಪಕ್ಷ ನಿಷ್ಟೆ ಕಾರಣಕ್ಕೆ ಕರೆಸಿಕೊಂಡು ಕೆಲ ಮಾಹಿತಿ ಪಡೆಯಲಾಗುತ್ತಿದೆ ಎನ್ನಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img