Friday, July 23, 2021
Homeಸುದ್ದಿ ಜಾಲಲೋಕಸಭೆ ಚುನಾವಣೆವರೆಗೂ ಸೋನಿಯಾ ಅಧ್ಯಕ್ಷೆ

ಇದೀಗ ಬಂದ ಸುದ್ದಿ

ಲೋಕಸಭೆ ಚುನಾವಣೆವರೆಗೂ ಸೋನಿಯಾ ಅಧ್ಯಕ್ಷೆ

ನವದೆಹಲಿ: ಮುಂದಿನ ಲೋಕಸಭೆ ಚುನಾವಣೆವರೆಗೂ ಕಾಂಗ್ರೆಸ್​ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರೆಯುತ್ತಾರೆ. ಇದೇ ವೇಳೆ, ಪಕ್ಷದಲ್ಲಿನ ಕೆಲವು ಹಿರಿಯ ನಾಯಕರಿಗೆ ಮಹತ್ವದ ಸ್ಥಾನಮಾನ ನೀಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರಾಹುಲ್​ ಗಾಂಧಿ ಅವರಿಗೆ ಪುನಃ ಅಧ್ಯಕ್ಷಗಿರಿ ವಹಿಸಿಕೊಳ್ಳಲು ಇಷ್ಟವಿಲ್ಲದ ಕಾರಣ, ಸೋನಿಯಾ ಅವರನ್ನೇ ಹುದ್ದೆಯಲ್ಲಿ ಮುಂದುವರೆಸಲು ತೀರ್ಮಾನಿಸಲಾಗಿದೆ. ಆದರೆ ಸೋನಿಯಾ ಗಾಂಧಿಯವರಿಗೆ ಪುತ್ರ ರಾಹುಲ್​ ಸಲಹೆಗಾರರಾಗಿ ಇರುತ್ತಾರೆ. ಗುಲಾಂ ನಬಿ ಆಜಾದ್​, ಸಚಿನ್​ ಪೈಲಟ್, ಕುಮಾರಿ ಸೆಲ್ಜಾ, ಮುಕುಲ್​ ವಾಸ್ನಿಕ್​ ಹಾಗೂ ರಮೇಶ್​​ ಚಿನ್ನತಿಹಾಲ್ ಅವ​ರನ್ನು​​ ಕಾರ್ಯಾಧ್ಯಕ್ಷ (Working Presidents) ಸ್ಥಾನಕ್ಕೆ ನೇಮಿಸುವ ಸಾಧ್ಯತೆ ದಟ್ಟವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img