Friday, July 23, 2021
Homeಸುದ್ದಿ ಜಾಲ100 ದೇಗುಲಗಳಲ್ಲಿ ಮತ್ತೆ 'ಸಪ್ತಪದಿ' ಆರಂಭ:ಶ್ರೀನಿವಾಸ ಪೂಜಾರಿ

ಇದೀಗ ಬಂದ ಸುದ್ದಿ

100 ದೇಗುಲಗಳಲ್ಲಿ ಮತ್ತೆ ‘ಸಪ್ತಪದಿ’ ಆರಂಭ:ಶ್ರೀನಿವಾಸ ಪೂಜಾರಿ

ಶಿವಮೊಗ್ಗ: ಕೋವಿಡ್‌ ಸಂಕಷ್ಟದ ಸಮಯದಲ್ಲಿ ಸ್ಥಗಿತಗೊಳಿಸಲಾಗಿದ್ದ ಸಪ್ತಪದಿ ಯೋಜನೆ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ. ರಾಜ್ಯದ 100 ಆಯ್ದ ದೇವಸ್ಥಾನಗಳಲ್ಲಿ ಸರ್ಕಾರದಿಂದಲೇ ಸರಳ ವಿವಾಹ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಅವರು ಮಾಧ್ಯಮಗಳಿಗೆ ವಿವರ ನೀಡಿದರು.

ಈ ಯೋಜನೆಯಡಿ ಮದುವೆಯಾಗುವ ವಧುವಿಗೆ ₹ 40 ಸಾವಿರ ಮೌಲ್ಯದ ಚಿನ್ನ, 10 ಸಾವಿರ ನಗದು, ಧಾರೆ ಸೀರೆ ಹಾಗೂ ವರನಿಗೆ ₹ 5 ಸಾವಿರ ನಗದು ನೀಡಲಾಗುವುದು. ಮದುವೆಗಳಿಗೆ ಈಗಾಗಲೆ ಮುಹೂರ್ತ ನಿಗದಿಪಡಿಸಲಾಗಿದೆ. ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊರೊನಾ ಸಮಯ ಕಳೆದ ನಂತರ ಜನಸಾಮಾನ್ಯರು ಆಡಂಬರದ ಮದುವೆಗಿಂತ ಸರಳ ಮದುವೆಗಳತ್ತ ಮನಸ್ಸು ಮಾಡುತ್ತಿದ್ದಾರೆ. ಸರ್ಕಾರ ಆಯೋಜಿಸುವ ಮದುವೆಗಳತ್ತ ಒಲವು ತೋರುತ್ತಿದ್ದಾರೆ ಎಂದರು.

ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೂಲ ಸೌಕರ್ಯ ಸೇರಿದಂತೆ ದೇವಸ್ಥಾನದ ಸರ್ವಾಂಗೀಣ ವಿಕಾಸಕ್ಕೆ ಕ್ರಮ ಕೈಗೊಳ್ಳಲು ನೆರವು ನೀಡಲಾಗುವುದು. ಕ್ರಿಯಾ ಯೋಜನೆ ರೂಪಿಸಿ, ಸಲ್ಲಿಸಲು ಸೂಚಿಸಲಾಗಿದೆ. ಶೀಘ್ರ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಜಿಲ್ಲೆಗೆ ಅಗತ್ಯವಾಗಿರುವ ಹಾಗೂ ಅರ್ಚಕರ ಕೋರಿಕೆಯಂತೆ ವಸತಿಯುಕ್ತ ಆಗಮ ವೇದ ಪಾಠಶಾಲೆಗಳನ್ನು ಮಂಜೂರು ಮಾಡಲಾಗುವುದು. ಈ ವೇದಾದ್ಯಯನ ಶಾಲೆಯು ಆಗಸ್ಟ್-ಡಿಸೆಂಬರ್‌ನಲ್ಲಿ ಆರಂಭವಾಗಲಿವೆ ಎಂದು ಮಾಹಿತಿ ನೀಡಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img