Friday, July 30, 2021
Homeಸುದ್ದಿ ಜಾಲ2 ರಾಜ್ಯಗಳಲ್ಲಿ ಭಾರಿ ಭೂಕಂಪ...!

ಇದೀಗ ಬಂದ ಸುದ್ದಿ

2 ರಾಜ್ಯಗಳಲ್ಲಿ ಭಾರಿ ಭೂಕಂಪ…!

ಎರಡು ರಾಜ್ಯಗಳಲ್ಲಿ ಮೂರು ಗಂಟೆಯ ಅಂತರದಲ್ಲಿ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿದ್ದಾರೆ. ರಾಜಸ್ಥಾನದ ಬಿಕಾನೇರ್​ ಮತ್ತು ಮೇಘಾಲಯದ ಪಶ್ಚಿಮ ಗಾರೊ ಹಿಲ್ಸ್ ಜಿಲ್ಲೆಯಲ್ಲಿ ಭೂಮಿ ಕಂಪಿಸಿದೆ.

ಮೇಘಾಲಯದಲ್ಲಿ ನಡುಗಿದ ಭೂಮಿ:ಇಲ್ಲಿನ ಪಶ್ಚಿಮ ಗಾರೊ ಹಿಲ್ಸ್ ಜಿಲ್ಲೆಯಲ್ಲಿ ಇಂದು ನಸುಕಿನ ಜಾವ 2:10 ಗಂಟೆಗೆ ಭೂಮಿ ಕಂಪಿಸಿದೆ. ರಿಕ್ಟರ್​ ಮಾಪಕದಲ್ಲಿ 4.1 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (NCS​) ಮಾಹಿತಿ ನೀಡಿದೆ.

ರಾಜಸ್ಥಾನದಲ್ಲಿ ಭಾರೀ ಭೂಕಂಪ: ಇಲ್ಲಿನ ಬಿಕಾನೇರ್​ದಲ್ಲಿ ಭಾರಿ ಭೂಕಂಪನ ಸಂಭವಿಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ನಷ್ಟವಾಗಿರಬಹುದಾಗಿದೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಪ್ರಕಾರ, ಇಂದು ಬೆಳ್ಳಂಬೆಳಗ್ಗೆ 5:24 ಗಂಟೆಗೆ ಭೂಮಿ ಕಂಪಿಸಿದ್ದು, ರಿಕ್ಟರ್​ ಮಾಪಕದಲ್ಲಿ 5.3 ರಷ್ಟು ತೀವ್ರತೆ ದಾಖಲಾಗಿದೆ ಎಂದು ಹೇಳಿದೆ.

ಒಟ್ಟಿನಲ್ಲಿ ಮೂರು ಗಂಟೆಗಳ ಅಂತರದಲ್ಲಿ ದೇಶದ ಎರಡು ರಾಜ್ಯದಲ್ಲಿ ಭೂಕಂಪನ ಸಂಭವಿಸಿದ್ದು, ಜನರು ಭಯಭೀತರಾಗಿದ್ದಾರೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img