Thursday, July 29, 2021
Homeಸುದ್ದಿ ಜಾಲಬಿಗ್​ಬಾಸ್​ -8:ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ವೈಷ್ಣವಿ

ಇದೀಗ ಬಂದ ಸುದ್ದಿ

ಬಿಗ್​ಬಾಸ್​ -8:ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ವೈಷ್ಣವಿ

ರೇಷ್ಮೇ ಸೀರೆ ಎಂದೇ ಖ್ಯಾತಿ ಪಡೆದಿರುವ ವೈಷ್ಣವಿ ಗೌಡ ಇದೇ ಮೊದಲ ಬಾರಿಗೆ ಕೋಪಗೊಂಡಿದ್ದರು. ಸದಾ ನಗುನಗುತ್ತಲೇ ಎಲ್ಲರನ್ನೂ ಸಂಭಾಳಿಸುವ ವೈಷ್ಣವಿ, ತಾಳ್ಮೆ ಕಳೆದುಕೊಂಡು ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಲು ಮುಂದಾಗುತ್ತಾರೆ. ತಕ್ಷಣವೇ ಅಲ್ಲಿಗೆ ಅದನ್ನು ಬಿಡುತ್ತಾರೆ.

ಬಿಗ್​ಬಾಸ್ ‘ಏನಾಗಲಿ ಮುಂದೆ ಓಡು ನೀ’ ಎಂಬ ಚೀಲ ಹೊರುವ ಟಾಸ್ಕ್ ನೀಡಿದ್ದರು. ಒಬ್ಬರ ಹಿಂದೆ ಒಬ್ಬರು ಓಡುತ್ತಾ ಮುಂದಿನವರ ಚೀಲವನ್ನು ಹರಿದು ಅದರೊಳಗಿನ ಥರ್ಮೋಕೋಲ್ ಖಾಲಿ ಮಾಡಬೇಕಿತ್ತು. ಹೀಗೆ ಓಡುವಾಗ ಪ್ರಶಾಂತ್​ ಸಂಬರಗಿ ಅವರು ವೈಷ್ಣವಿ ಅವರ ಚೀಲದಲ್ಲಿರುವ ವಸ್ತುವನ್ನು ಖಾಲಿ ಮಾಡಲು ಪ್ರಯತ್ನಿಸುತ್ತಾರೆ. ಈ ವೇಳೆ, ವೈಷ್ಣವಿ ಅವರು ಪ್ರಶಾಂತ್ ಅವರ ಮೇಲೆ ಎಳೆಯಬೇಡಿ ಎಂದು ಕೂಗುತ್ತಾರೆ.

ಅದಕ್ಕೆ ಕೋಪಗೊಂಡ ವೈಷ್ಣವಿ ಕೈ ಎತ್ತುತ್ತಾರೆ. ತಕ್ಷಣವೇ ಕೋಪ ಬಿಟ್ಟು ಆಟದಿಂದ ಹೊರ ನಡೆದು ಬರುತ್ತಾರೆ. ಶುಭಾ ಪೂಂಜಾ ಅವರ ಬಳಿ ಪ್ರಶಾಂತ್ ಆಡಿದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಜಂಟಲ್​ಮೆನ್​ ಎಂದು ಹೇಳಿಕೊಂಡು ಹೀಗೆಲ್ಲ ಆಡುತ್ತಾರೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img