Friday, July 30, 2021
Homeಸುದ್ದಿ ಜಾಲಸದ್ಯಕ್ಕೆ ನಾಯಕತ್ವ ಬದಲಾವಣೆಯಿಲ್ಲ : ಸಂಸದ ಡಿ ವಿ ಸದಾನಂದ ಗೌಡ

ಇದೀಗ ಬಂದ ಸುದ್ದಿ

ಸದ್ಯಕ್ಕೆ ನಾಯಕತ್ವ ಬದಲಾವಣೆಯಿಲ್ಲ : ಸಂಸದ ಡಿ ವಿ ಸದಾನಂದ ಗೌಡ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಈಗ ಸಿಎಂ ಬದಲಾವಣೆಯದ್ದೇ ಬಿಸಿ ಬಿಸಿ ಸುದ್ದಿ. ಸಿಎಂ ಪರವಾಗಿ ಮಠಾಧೀಶರು ಬ್ಯಾಟ್ ಬೀಸಿದ್ದರೇ, ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ದೆಹಲಿಯಲ್ಲಿ ದಿಢೀರ್ ಪ್ರತ್ಯಕ್ಷವಾಗಿ ಬಿಜೆಪಿ ಹೈಕಮಾಂಡ್ ಮೇಲೆ ಕೊನೆಯ ಅಸ್ತ್ರ ಪ್ರಯೋಗಿಸೋದಕ್ಕೆ ಮುಂದಾಗಿದ್ದಾರೆ. 

ಸಿಎಂ ಬದಲಾವಣೆ ಕುರಿತಂತೆ ಇಂದು ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆದಂತ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದಂತ ಮಾಜಿ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು, ಸದ್ಯಕ್ಕೆ ನಾಯಕತ್ವ ಬದಲಾವಣೆಯಿಲ್ಲ. ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡ್ತಾ ಇದ್ದಾರೆ. ಅವರ ಬದಲಾವಣೆ ಪ್ರಶ್ನೆ ಕೇಂದ್ರದ ನಾಯಕರಲ್ಲಿ ಉದ್ಭವಿಸಿಲ್ಲ ಎಂಬುದಾಗಿ ಹೇಳಿದರು.

ಮತ್ತೊಂದೆಡೆ, ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡಿದ ನಂತ್ರ, ಆ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಮತ್ತೊಬ್ಬ ನಾಯಕನಿಗೇ, ಬಿಜೆಪಿ ಹೈಕಮಾಂಡ್ ನೀಡಲಿದೆ ಎನ್ನಲಾಗುತ್ತಿದೆ. ಈ ಸ್ಥಾನದ ಆಕಾಂಕ್ಷಿತರಲ್ಲಿ ಮುಂಚೂಣಿಯಲ್ಲಿ ಸಚಿವ ಮುರುಗೇಶ್ ನಿರಾಣಿ ಹೆಸರು ಕೇಳಿ ಬರುತ್ತಿದೆ. ಇವರೊಂದಿಗೆ ಅರವಿಂದ್ ಬೆಲ್ಲದ್ ಹೆಸರು ಕೂಡ ಸದ್ದು ಮಾಡುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img