Friday, July 23, 2021
Homeಜಿಲ್ಲೆಧಾರವಾಡಬಿಎಸ್​​ವೈ ಪರ ಮತ್ತೋರ್ವ ಸ್ವಾಮೀಜಿ ಬ್ಯಾಟಿಂಗ್

ಇದೀಗ ಬಂದ ಸುದ್ದಿ

ಬಿಎಸ್​​ವೈ ಪರ ಮತ್ತೋರ್ವ ಸ್ವಾಮೀಜಿ ಬ್ಯಾಟಿಂಗ್

ಧಾರವಾಡ: ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಾಗಿನಿಂದ ರಾಜ್ಯದ ಬಹುತೇಕ ಸ್ವಾಮೀಜಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. ಬಿಎಸ್​ವೈ ಅವರನ್ನು ಕೈಬಿಟ್ಟರೆ ಸರ್ಕಾರ ಬೀಳುವುದು ಗ್ಯಾರಂಟಿ ಎಂದು ಸಿಎಂ ಪರ ಇಲ್ಲಿನ ಮುರುಘಾಮಠದ‌ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಬ್ಯಾಟಿಂಗ್ ಮಾಡಿದ್ದಾರೆ.

ಈ‌ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನಂತ ಸಿಎಂ ಸಿಗುವುದು ಕಷ್ಟ, ಅವರನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಲೇಬೇಕು. ಯಡಿಯೂರಪ್ಪ ಕೈ ಬಿಟ್ಟರೇ ಆರೇ ತಿಂಗಳಲ್ಲಿ ಸರ್ಕಾರ ಢಮ್ ಅನ್ನುತ್ತೆ(ಬೀಳುತ್ತೆ). ಯಾವುದೇ ಪಕ್ಷದ ಸರ್ಕಾರ ಬಂದರೂ ಅಧಿಕಾರದಲ್ಲಿ ಇರೋಕಾಗಲ್ಲ. ಯಡಿಯೂರಪ್ಪರವರನ್ನು ಬದಲಿಸಿದರೆ ಬಿಜೆಪಿಗೆ ದೊಡ್ಡ ಹೊಡೆತ ಬೀಳುತ್ತದೆ. ಕರ್ನಾಟಕದ ಬಿಜೆಪಿಗೆ ಅವರು ಅಡಿಪಾಯ ಇದ್ದಂತೆ ಎಂದು ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img