Sunday, August 1, 2021
Homeಸುದ್ದಿ ಜಾಲಪಂದ್ಯ ಸೋತ ಬಳಿಕ ಶ್ರೀಲಂಕಾ ಕ್ಯಾಪ್ಟನ್​-ಕೋಚ್​ ನಡುವೆ ಮಾತಿನ ಚಕಮಕಿ

ಇದೀಗ ಬಂದ ಸುದ್ದಿ

ಪಂದ್ಯ ಸೋತ ಬಳಿಕ ಶ್ರೀಲಂಕಾ ಕ್ಯಾಪ್ಟನ್​-ಕೋಚ್​ ನಡುವೆ ಮಾತಿನ ಚಕಮಕಿ

ಕೊಲಂಬೊ: ಶಿಖರ್ ಧವನ್​​ ನೇತೃತ್ವದ ಟೀಂ ಇಂಡಿಯಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ಆತಿಥೇಯ ಶ್ರೀಲಂಕಾ ತಂಡ ಸೋಲು ಕಂಡಿದೆ. ಈ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಭಾರತ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಂಡಿದೆ. ಈ ಪಂದ್ಯ ಸೋಲುತ್ತಿದ್ದಂತೆ ಶ್ರೀಲಂಕಾ ಕ್ಯಾಪ್ಟನ್​ ಹಾಗೂ ಕೋಚ್​ ನಡುವೆ ಮಾತಿನ ಚಕಮಕಿ ನಡೆಯಿತು.

ಲಂಕಾ ನೀಡಿದ 276 ರನ್​ ಬೆನ್ನತ್ತಿದ್ದ ಟೀಂ ಇಂಡಿಯಾ 7 ವಿಕೆಟ್ ​ನಷ್ಟಕ್ಕೆ 196 ರನ್​ಗಳಿಕೆ ಮಾಡಿ, ಸೋಲಿನ ಸುಳಿಗೆ ಸಿಲುಕಿಕೊಂಡಿತ್ತು. ಈ ವೇಳೆ ಆಕರ್ಷಕ ಜೊತೆಯಾಟವಾಡಿದ ದೀಪಕ್‌ ಚಹರ್ ​(69) ಹಾಗೂ ಉಪನಾಯಕ ಭುವನೇಶ್ವರ್​ ಕುಮಾರ್ (19) ತಂಡವನ್ನು ಗೆಲುವಿನ ದಡ ಸೇರಿಸಿದರು. ಸುಲಭವಾಗಿ ಗೆಲುವು ಸಾಧಿಸಬೇಕಾದ ಪಂದ್ಯದಲ್ಲಿ ಲಂಕಾ ಪಡೆ ಸೋಲು ಕಂಡಿದ್ದರಿಂದ ತಂಡದ ಕೋಚ್​ ಮಿಕ್ಕಿ ಆರ್ಥರ್​ ಆಕ್ರೋಶಗೊಂಡರು. ಜೊತೆಗೆ, ಕ್ಯಾಪ್ಟನ್​ ದಸುನ್​ ಶನಕ್ ವಿರುದ್ಧ ವಾಗ್ದಾಳಿ ನಡೆಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img