Sunday, August 1, 2021
Homeಬೆಂಗಳೂರುಅನುಮಾನ ಮೂಡಿಸಿದ ದ್ವಿತೀಯ ಪಿಯುಸಿ ಫಲಿತಾಂಶ..

ಇದೀಗ ಬಂದ ಸುದ್ದಿ

ಅನುಮಾನ ಮೂಡಿಸಿದ ದ್ವಿತೀಯ ಪಿಯುಸಿ ಫಲಿತಾಂಶ..

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದೇ ಮಂಗಳವಾರ ಫಲಿತಾಂಶವನ್ನು ಪ್ರಕಟ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ನೀಡಿರುವ ಅಂಕಗಳೇ ಅನುಮಾನ ಮೂಡಿಸುವುದಕ್ಕೆ ಕಾರಣವಾಗಿದೆ. ಕೆಲ ಕಾಲೇಜುಗಳು ತಮ್ಮ ಕಾಲೇಜಿಗೆ ಹೆಸರು ಬರಲಿ ಎನ್ನುವ ಉದ್ದೇಶದಿಂದ ಮಕ್ಕಳಿಗೆ ಹೆಚ್ಚಿನ ಅಂಕಗಳನ್ನು ನೀಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ಈ ಬಾರಿ ಮಕ್ಕಳ ಫಲಿತಾಂಶವನ್ನು ಆಧಾರದ ಮೇಲೆ ಪ್ರಕಟ ಮಾಡಲಾಗಿದ್ದು, ಸಹಜವಾಗಿ ಅಂಕಗಳು ಕಾಲೇಜಿನ ಅಡಳಿತ ಮಂಡಳಿ ಹಾಗೂ ಆಯಾ ಕಾಲೇಜುಗಳ ಉಪನ್ಯಾಸಕರೇ ನೀಡಬೇಕಾಗಿರುವುದರಿಂದ ಸಹಜವಾಗಿ ತಮ್ಮ ಕಾಲೇಜಿಗೆ ಹೆಸರು ಬರುವುದಕ್ಕಾಗಿ ಮಕ್ಕಳಿಗೆ ಹೆಚ್ಚಿನ ಅಂಕಗಳನ್ನು ನೀಡಿದ್ದಾರೆ ಎನ್ನಲಾಗಿದ್ದು, ಒಂದು ವೇಳೆ ನಿಜವಾಗಿದ್ದರೇ ಇದು ಮುಂಬರುವ ಶೈಕ್ಷಣಿಕ ವ್ಯವಸ್ಥೆಯನ್ನು ಹಾಳು ಮಾಡುವುದರಲ್ಲಿ ಸಂಶಯವಿಲ್ಲ ಎನ್ನುತ್ತಿದ್ದಾರೆ.

ಈ ಬಾರಿಯ ದ್ವೀತಿಯ ಪಿಯುಸಿಯ ಫಲಿತಾಂಶವನ್ನು ಎಸ್ಸೆಸ್ಸೆಲ್ಸಿ ಅಥವಾ ಇತರ ಮಂಡಳಿಗಳ 10ನೇ ತರಗತಿಯಲ್ಲಿ ಪಡೆದ ವಿಷಯವಾರು ಅಂಕಗಳಲ್ಲಿ ಶೇ 45ರಷ್ಟು ಅಂಕ, ಪ್ರಥಮ ಪಿಯುಸಿಯಲ್ಲಿ ವಿದ್ಯಾರ್ಥಿನಿಗಳು ತೆಗೆದುಕೊಂಡಿದ್ದ ಶೇ 45ರಷ್ಟು ಅಂಕ, ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಯ ಶೈಕ್ಷಣಿಕ ಚಟುವಟಿಕೆಗೆ ಸಂಬಂಧಪಟ್ಟಂತೆ ಶೇ 10ರಷ್ಟು ಅಂಕಗಳು ಮತ್ತು ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳಿಗೆ ಶೇ 5 ಕೃಪಾಂಕ ನೀಡಿ ಫಲಿತಾಂಶವನ್ನು ಪ್ರಕಟ ಮಾಡಲಾಗಿದೆ ಅಂಥ ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಮಂಗಳವಾರ ದ್ವೀತಿಯ ಪಿಯುಸಿ ಫಲಿತಾಂಶಕ್ಕೆ ಸಂಬಂಧಪಟ್ಟಂತೆ ನೀಡಿದ ಮಾಹಿತಿ ವೇಳೆ ತಿಳಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img