Thursday, July 29, 2021
Homeಸುದ್ದಿ ಜಾಲಹಕ್ಕಿ ಜ್ವರಕ್ಕೆ 12 ವರ್ಷದ ಬಾಲಕ ಬಲಿ

ಇದೀಗ ಬಂದ ಸುದ್ದಿ

ಹಕ್ಕಿ ಜ್ವರಕ್ಕೆ 12 ವರ್ಷದ ಬಾಲಕ ಬಲಿ

ದೆಹಲಿ : ಇದುವರೆಗೆ ಹಕ್ಕಿ ಜ್ವರದಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಆದ್ರೇ.. ದೇಶದಲ್ಲೇ ಮೊದಲು ಎನ್ನುವಂತೆ ಹಕ್ಕಿಜ್ವರದಿಂದಾಗಿ 12 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ದೆಹಲಿಯ ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಮಕ್ಕಳ ವಿಭಾಗದಲ್ಲಿ ಹಕ್ಕಿಜ್ವರದಿಂದ ಚಿಕಿತ್ಸೆಗಾಗಿ ದಾಖಲಾಗಿದ್ದಂತ 12 ವರ್ಷದ ಬಾಲಕನೊಬ್ಬ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದು ದೇಶದಲ್ಲೇ ಮೊದಲ ಹಕ್ಕಿಜ್ವರದಿಂದಾಗಿ ಸಾವನ್ನಪ್ಪಿದಂತ ಪ್ರಕರಣವಾಗಿದೆ.

ಇನ್ನೂ ಹೆಚ್1ಎನ್1 ಸೋಂಕಿನಿಂದಾಗಿ ಬಲಿಯಾದಂತ ಬಾಲಕನ ಸಂಪರ್ಕಕ್ಕೆ ಬಂದಂತ ದೆಹಲಿಯ ಏಮ್ಸ್ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳನ್ನು ಐಸೋಲೇಷನ್ ನಲ್ಲಿ ಇರಿಸಲಾಗಿದೆ. ಅಂದಹಾಗೇ ಹಕ್ಕಿ ಜ್ವರದ ಸೋಂಕಿಗೆ ಒಳಗಾಗಿದ್ದಂತ 12 ವರ್ಷದ ಬಾಲಕನು ಲ್ಯುಕೋಮಿಯಾ ಮತ್ತು ನ್ಯುಮೋನಿಯಾ ಕೂಡ ಇತ್ತು ಎಂಬುದಾಗಿ ತಿಳಿದು ಬಂದಿದೆ. ಇಂತಹ ಬಾಲಕನನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img