Friday, July 23, 2021
Homeಸುದ್ದಿ ಜಾಲಪೆಟ್ರೋಲ್, ಡೀಸೆಲ್ ಇಂಧನ ದರ ಎಷ್ಟಿದೆ?

ಇದೀಗ ಬಂದ ಸುದ್ದಿ

ಪೆಟ್ರೋಲ್, ಡೀಸೆಲ್ ಇಂಧನ ದರ ಎಷ್ಟಿದೆ?

ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಕಳೆದ ಎರಡು ದಿನಗಳಿಂದ ಸ್ಥಿರವಾಗಿತ್ತು. ಅದೇ ರೀತಿ ಇಂದು ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್​ ದರ ಗರಿಷ್ಟ ಮಟ್ಟದಲ್ಲಿಯೇ ಇದೆ. ಇಂಧನ ದರ ಹೆಚ್ಚಳವಾಗದೇ ಸ್ಥಿರತೆಯನ್ನು ಕಾಯ್ದುಕೊಂಡಿರುವುದು ವಾಹನ ಸವಾರರಿಗೆ ಕೊಂಚ ಸಮಾಧಾನ ತರುವ ವಿಚಾರ. ಕಳೆದ ಬಾರಿ ದರ ಏರಿಕೆಯ ಬಳಿಕ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ದರ 101.84 ರೂಪಾಯಿ ಆಗಿದೆ.

ಲೀಟರ್​ ಡೀಸೆಲ್​ ದರ 89.87 ರೂಪಾಯಿ ಇದೆ. ಅದೇ ದರವನ್ನು ಮೂರು ದಿನಗಳಿಂದ ಕಾಯ್ದುಕೊಂಡು ಬಂದಿದೆ. ಜನವರಿ 1ನೇ ತಾರೀಕಿನಿಂದ ಜುಲೈ 9ರವರೆಗೆ ಪೆಟ್ರೋಲ್​ ದರ ಒಟ್ಟು 63 ಬಾರಿ ಹಾಗೂ ಡೀಸೆಲ್​ ದರವನ್ನು 61ಬಾರಿ ಏರಿಕೆ ಮಾಡಲಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್​ ಪೆಟ್ರೋಲ್ ದರ 107.83 ರೂಪಾಯಿ ಇದೆ. ಅದೇ ರೀತಿ ಲೀಟರ್​ ಡೀಸೆಲ್​ ದರ 97.45 ರೂಪಾಯಿ ಇದೆ. ಮೇ 29ನೇ ತಾರೀಕಿನಂದೇ ಮುಂಬೈನಲ್ಲಿ ಲೀಟರ್​ ಪೆಟ್ರೋಲ್​ ದರ ಶತಕ ಬಾರಿಸಿ ಮುನ್ನುಗ್ಗುತ್ತಿದೆ.

ಕೋಲ್ಕತ್ತಾದಲ್ಲಿ ಲೀಟರ್​ ಪೆಟ್ರೋಲ್​ ದರ 102.08 ರೂಪಾಯಿ ಇದ್ದರೆ, ಲೀಟರ್​ ಡೀಸೆಲ್​ ದರ 93.02 ರೂಪಾಯಿ ಇದೆ. ಚೆನ್ನೈನಲ್ಲಿ ಲೀಟರ್​ ಪೆಟ್ರೊಲ್​ ಬೆಲೆ 102.49 ರೂಪಾಯಿ ಇದೆ. ಹಾಗೆಯೇ ಲೀಟರ್​ ಡೀಸೆಲ್​ ದರ 94.39 ರೂಪಾಯಿ ಇದೆ. ಇನ್ನು, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಒಡಿಶಾ, ತಮಿಳುನಾಡು, ಕೇರಳ, ಬಿಹಾರ ಮತ್ತು ಪಂಜಾಬ್​ನಲ್ಲಿ ಲೀಟರ್ ಪೆಟ್ರೋಲ್​ ದರ ಶತಕ ಬಾರಿಸಿ ಮುನ್ನುತ್ತಿದ್ದು ಗರಿಷ್ಟ ಮಟ್ಟ ತಲುಪಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img