Friday, July 30, 2021
Homeಸುದ್ದಿ ಜಾಲಇಂದು ದ್ವಿತೀಯ PUC ಫಲಿತಾಂಶ ಪ್ರಕಟ

ಇದೀಗ ಬಂದ ಸುದ್ದಿ

ಇಂದು ದ್ವಿತೀಯ PUC ಫಲಿತಾಂಶ ಪ್ರಕಟ

ಬೆಂಗಳೂರು: ಕೊರೊನಾ‌ ಕಾರಣಕ್ಕೆ ಇದೇ ಮೊದಲ ಬಾರಿಗೆ ಪರೀಕ್ಷೆ ಇಲ್ಲದೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನ ಪಾಸ್ ಮಾಡಲಾಗಿದೆ. ಎಸ್ಎಸ್ಎಲ್​​ಸಿ ಹಾಗೂ ಪ್ರಥಮ ಪಿಯುಸಿಯ ಅಂಕಗಳ ಆಧಾರದ ಮೇಲೆ ಫಲಿತಾಂಶವನ್ನ ನೀಡಲಾಗುತ್ತಿದೆ.

ಈ ಮೊದಲು ಗ್ರೇಡಿಂಗ್ ಪದ್ಧತಿಯಲ್ಲಿ ಫಲಿತಾಂಶ ನೀಡುವ ತೀರ್ಮಾನ‌ ಮಾಡಿದ್ದ ಇಲಾಖೆ ನಂತರ ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡಲು ಸಿದ್ಧವಾಗಿದೆ‌.‌ ಒಂದು ವೇಳೆ ಈ ಫಲಿತಾಂಶ ವಿದ್ಯಾರ್ಥಿಗಳಿಗೆ ತೃಪ್ತಿ ತಂದಿಲ್ಲವಾದರೆ ಮುಂದಿನ ದಿನಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂಬ ಮಾಹಿತಿ ಇದೆ.

ಇಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳಲಿದೆ‌. ಮಂಗಳವಾರ ಮಧ್ಯಾಹ್ನ 4-30ಕ್ಕೆ ಫಲಿತಾಂಶ ಹೊರಬೀಳಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್ ಸೈಟ್ www.pue.kar.nic.in ನಲ್ಲಿ ಫಲಿತಾಂಶ ಲಭ್ಯವಿರಲಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img