Thursday, July 29, 2021
Homeಜಿಲ್ಲೆಬೆಂಗಳೂರುಸಿಎಂಗೆ ಮಠಾಧೀಶರ ಅಭಯ..

ಇದೀಗ ಬಂದ ಸುದ್ದಿ

ಸಿಎಂಗೆ ಮಠಾಧೀಶರ ಅಭಯ..

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ವದಂತಿ ವಿಚಾರದ ಹಿನ್ನೆಲೆ ಸಚಿವರು ಮತ್ತು ಶಾಸಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಭೇಟಿ ಮಾಡಿದ ಬೆನ್ನಲ್ಲೇ ಮಠಾಧೀಶರು ಕೂಡ ಸಿಎಂ ನಿವಾಸದತ್ತ ದೌಡಾಯಿಸುತ್ತಿದ್ದಾರೆ.

ಯಡಿಯೂರಪ್ಪನವರೇ ಪೂರ್ಣಾವಧಿಯಾಗಿ ಸಿಎಂ ಆಗಬೇಕು ಎಂಬ ನಿಲುವು ವ್ಯಕ್ತಪಡಿಸಿರುವ ಶ್ರೀಗಳು, ಏನೇ ಆದರೂ ನಿಮ್ಮ ಜೊತೆ ಸಮುದಾಯ ಇರಲಿದೆ. ಯಾವುದಕ್ಕೂ ಚಿಂತೆ ಮಾಡಬೇಡಿ ಎಂದು ಅಭಯ ನೀಡಿದ್ದಾರೆ.

ಮಧ್ಯಾಹ್ನ 12.30 ರ ವೇಳೆಗೆ ಸಿಎಂ ನಿವಾಸಕ್ಕೆ ಅಳಂದ ಮಠದ ಮರುಳ ಸಿದ್ದೇಶ್ವರ ಸ್ವಾಮೀಜಿ ಆಗಮಿಸಿದರು. ಸಿಎಂ ತಮ್ಮ ನಿವಾಸದಲ್ಲಿ ಇಲ್ಲ. ವಿಧಾನಸೌಧದಲ್ಲಿದ್ದಾರೆ ಎಂದರೂ ಕೇಳದೆ ಸಿಎಂ ಬರುವ ತನಕ ಕಾಯುತ್ತೇವೆ ಎಂದು ಸಿಎಂ ಕಾವೇರಿ ನಿವಾಸದೊಳಗೆ ಸ್ವಾಮೀಜಿ ತೆರಳಿದರು.‌ ಸಿಎಂ ಬಂದ ನಂತರ ಕೆಲಕಾಲ ಮಾತುಕತೆ ನಡೆಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img