Thursday, July 29, 2021
Homeಜಿಲ್ಲೆಬೆಂಗಳೂರುಯಶವಂತಪುರದಿಂದ ಕಣ್ಣೂರು, ಮಂಗಳೂರಿಗೆ ವಿಶೇಷ ರೈಲುಗಳ ಸಂಚಾರ ಆರಂಭ

ಇದೀಗ ಬಂದ ಸುದ್ದಿ

ಯಶವಂತಪುರದಿಂದ ಕಣ್ಣೂರು, ಮಂಗಳೂರಿಗೆ ವಿಶೇಷ ರೈಲುಗಳ ಸಂಚಾರ ಆರಂಭ

ಬೆಂಗಳೂರು : ನೈಋತ್ಯ ರೈಲ್ವೆಯು ರೈಲು ಪ್ರಯಾಣಿಕರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ನೈಋತ್ಯ ರೈಲ್ವೆಯು ಯಶವಂತಪುರದಿಂದ ಮಂಗಳೂರು ಸೆಂಟ್ರಲ್ ಮತ್ತು ಕಣ್ಣೂರಿಗೆ ವಿಶೇಷ ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಯಶವಂತಪುರ-ಕಣ್ಣೂರು ಎಕ್ಸ್ ಪ್ರೆಸ್ ವಿಶೇಷ (07389) ಜುಲೈ 23 ರಂದು ಪ್ರಾರಂಭವಾಗಲಿದ್ದು, ಪ್ರತಿದಿನ ರಾತ್ರಿ 8 ಗಂಟೆಗೆ ಯಶವಂತಪುರದಿಂದ ಹೊರಡಲಿದೆ. 07390 ಸಂಖ್ಯೆಯ ರಿಟರ್ನ್ ರೈಲು ಜುಲೈ 24 ರಂದು ಆರಂಭವಾಗಲಿದ್ದು, ಪ್ರತಿದಿನ ಸಂಜೆ 6.05 ಕ್ಕೆ ಕಣ್ಣೂರಿನಿಂದ ಹೊರಡಲಿದೆ.

ಮಂಗಳೂರು ಸೆಂಟ್ರಲ್ ಗೆ ರೈಲು ವಾರಕ್ಕೊಮ್ಮೆ ಮಾತ್ರ ಚಲಿಸುತ್ತದೆ. ರೈಲು ಸಂಖ್ಯೆ 07391 ಜುಲೈ 25 ರಿಂದ ಭಾನುವಾರ ರಾತ್ರಿ 11.55 ಕ್ಕೆ ಯಶವಂತಪುರದಿಂದ ಹೊರಡಲಿದೆ. ರೈಲು ಸಂಖ್ಯೆ 07392 ಜುಲೈ 26 ರಿಂದ ಸೋಮವಾರ ರಾತ್ರಿ 8.05 ಕ್ಕೆ ಮಂಗಳೂರು ಸೆಂಟ್ರಲ್ ನಿಂದ ಹೊರಡಲಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img