Sunday, August 1, 2021
Homeಸುದ್ದಿ ಜಾಲಉತ್ತರ ಪ್ರದೇಶದ ಬುಲಂದ್ ಶಹರ್ʼನಲ್ಲಿ ರಸ್ತೆ ಅಪಘಾತ..

ಇದೀಗ ಬಂದ ಸುದ್ದಿ

ಉತ್ತರ ಪ್ರದೇಶದ ಬುಲಂದ್ ಶಹರ್ʼನಲ್ಲಿ ರಸ್ತೆ ಅಪಘಾತ..

ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯ ಕೊತ್ವಾಲಿ ಸಿಕಂದರಾಬಾದ್ ಪ್ರದೇಶದ ಬಿಲ್ಸುರಿ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿಗೆ ಗಾಯಳಾಗಿವೆ.

ವರದಿಗಳ ಪ್ರಕಾರ, ಬುಲಂದ್ ಶಹರ್ ನಿಂದ ಗಾಜಿಯಾಬಾದ್ ಕಡೆಗೆ ಹೋಗುತ್ತಿದ್ದ ಬಸ್‌ ರಾಷ್ಟ್ರೀಯ ಹೆದ್ದಾರಿ 91ರ ಉದ್ದಕ್ಕೂ ವೇಗವಾಗಿ ಚಲಿಸುತ್ತಿತ್ತು. ಹಾದಿಯಲ್ಲಿ ಕಾರೊಂದು ಎದುರಾಗಿದ್ದು, ಬಸ್ ಪಕ್ಕಕ್ಕೆ ತಿರುಗಿಸಲಾಯ್ತು. ನಂತ್ರ ಬಸ್‌ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ಬಸ್ ಕಂದಕಕ್ಕೆ ಬಿದ್ದಿದೆ.

ಸ್ಥಳೀಯರು ಘಟನೆಯ ಮಾಹಿತಿಯನ್ನ ಪೊಲೀಸರಿಗೆ ನೀಡಿದ್ದು ನಂತ್ರ ರಕ್ಷಣಾ ಕಾರ್ಯ ನಡೆಸಲಾಗಿದೆ. ವಾಹನದೊಳಗೆ ಸಿಕ್ಕಿಬಿದ್ದ ಎಲ್ಲಾ ಗಾಯಗೊಂಡ ಪ್ರಯಾಣಿಕರನ್ನ ಹತ್ತಿರ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img