Thursday, July 29, 2021
Homeಸುದ್ದಿ ಜಾಲವೈದ್ಯರೊಬ್ಬರಲ್ಲಿ ಏಕಕಾಲಕ್ಕೆ ಆಲ್ಫಾ, ಡೆಲ್ಟಾ ಪ್ರಕರಣ ಪತ್ತೆ

ಇದೀಗ ಬಂದ ಸುದ್ದಿ

ವೈದ್ಯರೊಬ್ಬರಲ್ಲಿ ಏಕಕಾಲಕ್ಕೆ ಆಲ್ಫಾ, ಡೆಲ್ಟಾ ಪ್ರಕರಣ ಪತ್ತೆ

ಹೈದರಾಬಾದ್​: ಈವರೆಗೆ ಒಬ್ಬ ವ್ಯಕ್ತಿಗೆ ಕೋವಿಡ್​​ ಅಥವಾ ಅದರ ರೂಪಾಂತರ ಆಲ್ಫಾ ಅಥವಾ ಡೆಲ್ಟಾ ರೂಪಾಂತರಗಳು ಮಾತ್ರ ಕಾಣಿಸಿಕೊಳ್ಳುತ್ತಿದ್ದವು. ಆದರೆ, ಒಂದೇ ಸಮಯಲ್ಲಿ ಒಬ್ಬ ವ್ಯಕ್ತಿಗೆ ಆಲ್ಫಾ ಮತ್ತು ಡೆಲ್ಟಾ ವೈರಸ್​ಗಳು ವಕ್ಕರಿಸಿರುವ ಅಪರೂಪದ ಪ್ರಕರಣ ದೇಶದಲ್ಲಿ ಕಂಡು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಐಸಿಎಂಆರ್​ ಅಧಿಕಾರಿ ವಿಶ್ವಜ್ಯೋತಿ ಬೋರ್ಕಕೋಟಿ, ಮೊದಲಿಗೆ ವೈದ್ಯರ ಮಾದರಿಗಳನ್ನು ಪರೀಕ್ಷಿಸಲಾಯಿತು. ಆಗ ಎರಡೂ ರೂಪಾಂತರಗಳಿರುವುದು ಪತ್ತೆಯಾಯಿತು. ಮತ್ತೊಮ್ಮೆ ಪರೀಕ್ಷೆ ನಡೆಸಿದಾಗಲೂ ಎರಡು ರೂಪಾಂತರಗಳಿರುವುದು ಸ್ಪಷ್ಟವಾಯಿತು. ಕೆಲ ದಿನಗಳ ಹಿಂದೆ ವೈದ್ಯೆ ಪತಿಗೆ ಆಲ್ಫಾ ರೂಪಾಂತರ ದೃಢಪಟ್ಟಿತ್ತು ಎಂದು ತಿಳಿಸಿದ್ದಾರೆ.

ಅವರು ಲಸಿಕೆಯ ಎರಡು ಡೋಸ್​ಗಳನ್ನು ಪಡೆದಿದ್ದಾರೆ. ಸದ್ಯ, ವೈದ್ಯೆಗೆ ಗಂಭೀರವಾದ ರೋಗ ಲಕ್ಷಣಗಳಿಲ್ಲದಿರುವುದರಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img