Sunday, August 1, 2021
Homeಚಾಮರಾಜನಗರಕುಮಾರ ನಿಜಗುಣ ಸ್ವಾಮೀಜಿ ಇನ್ನಿಲ್ಲ

ಇದೀಗ ಬಂದ ಸುದ್ದಿ

ಕುಮಾರ ನಿಜಗುಣ ಸ್ವಾಮೀಜಿ ಇನ್ನಿಲ್ಲ

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಚಿಲುಕವಾಡಿಯ ಶಂಭುಲಿಂಗನ ಬೆಟ್ಟದ ಕುಮಾರ ನಿಜಗುಣ ಸ್ವಾಮೀಜಿ (88) ಅವರು ಸೋಮವಾರ ಮುಂಜಾವಿನಲ್ಲಿ ನಿಧನರಾದರು.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ ಅವರು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಯೋ ಸಹಜ ಕಾರಣದಿಂದ ಸೋಮವಾರ ರಾತ್ರಿ 2 ಗಂಟೆ ಸುಮಾರಿಗೆ‌ ಇಹಲೋಕ ತ್ಯಜಿಸಿದರು.

ಅಂತ್ಯಕ್ರಿಯೆ ಸಂಜೆ ಚಿಲುಕವಾಡಿ ಗ್ರಾಮದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ನೇರವೇರಲಿದೆ ಎಂದು ಗೊತ್ತಾಗಿದೆ.

1933ರ ಜೂನ್ 15ರಂದು ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಜನಿಸಿದ್ದ ಸ್ವಾಮೀಜಿ ಅವರ ಪೂರ್ವಾಶ್ರಮದ ಹೆಸರು ಪಿ.ಬಸವಣ್ಣ. ವೃತ್ತಿಯಲ್ಲಿ ವಕೀಲರಾಗಿದ್ದ ಅವರು ಗೃಹಸ್ಥರಾಗಿದ್ದರು. 1981 ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img