Sunday, August 1, 2021
Homeಜಿಲ್ಲೆಮಂಡ್ಯ100 ಅಡಿ ಸನಿಹಕ್ಕೆ ಕೆಆರ್‌ಎಸ್ ನೀರಿನ ಮಟ್ಟ

ಇದೀಗ ಬಂದ ಸುದ್ದಿ

100 ಅಡಿ ಸನಿಹಕ್ಕೆ ಕೆಆರ್‌ಎಸ್ ನೀರಿನ ಮಟ್ಟ

ಮಂಡ್ಯ: ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಜಲಾಶಯದ ನೀರಿನ ಮಟ್ಟ 100 ಅಡಿ ಸನಿಹಕ್ಕೆ ಬಂದು ನಿಂತಿದೆ.

ಹಾರಂಗಿ, ಹೇಮಾವತಿ, ಕೆಆರ್‌ಎಸ್ ಮತ್ತು ಕಬಿನಿ ಕಾವೇರಿ ಕೊಳ್ಳದ ಜಲಾಶಯಗಳಾಗಿವೆ. ಮಂಗಳವಾರದ ವರದಿಯಂತೆ ಹಾರಂಗಿಗೆ 9393. ಹೇಮಾವತಿಗೆ 8582. ಕೆಆರ್‌ಎಸ್‌ಗೆ 13,892. ಕಬಿನಿ ಜಲಾಶಯಕ್ಕೆ 9262 ಕ್ಯುಸೆಕ್ ಒಳಹರಿವು ಇದೆ.

ಕಾವೇರಿ ಕೊಳ್ಳದ ಪ್ರಮುಖ ಜಲಾಶಯ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್. ಮಂಗಳವಾರ ಜಲಾಶಯದ ನೀರಿನ ಮಟ್ಟ 99.50 ಅಡಿಗಳಿಗೆ ತಲುಪಿದೆ. ಜಲಾಶಯದ ಪೂರ್ಣ ಮಟ್ಟ 124.80 ಅಡಿಗಳು.

ಜಲಾಶಯಕ್ಕೆ 13,892 ಕ್ಯುಸೆಕ್ ಒಳಹರಿವು ಇದ್ದು, 2,153 ಕ್ಯುಸೆಕ್ ಹೊರ ಹರಿವು ಇದೆ. ಕಳೆದ ವರ್ಷದ ಜುಲೈ 20ರಂದು ಕೆಆರ್‌ಎಸ್ ನೀರಿನ ಮಟ್ಟ 106 ಅಡಿಗಳಾಗಿತ್ತು. ಆದರೆ ಈ ಬಾರಿ ಜುಲೈ ತಿಂಗಳಿನಲ್ಲಿ ಮಳೆ ಆರಂಭವಾಗಿದ್ದು, ಈಗ ಜಲಾಶಯದ ನೀರಿನ ಮಟ್ಟ 100 ಅಡಿ ತಲುಪುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img