Sunday, August 1, 2021
Homeಸುದ್ದಿ ಜಾಲಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಇದೀಗ ಬಂದ ಸುದ್ದಿ

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಬೆಂಗಳೂರು, ಜುಲೈ 20: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದೆ.

ಫಲಿತಾಂಶ ನೀಡಲು ಪಿಯು ಬೋರ್ಡ್ ಮುಂದೆ ಸವಾಲೊಂದು ಎದುರಾಗಿದ್ದು, ನೋಂದಣಿ ಸಂಖ್ಯೆ ಇಲ್ಲದೇ ಫಲಿತಾಂಶ ನೋಡುವುದು ಹೇಗೆ ಎಂಬ ಗೊಂದಲ ಬಗೆಹರಿಸಲು ಪಿಯು ಬೋರ್ಡ್ ಸ್ಪಷ್ಟನೆ ನೀಡಿದೆ. ಪ್ರತಿ ವರ್ಷ ಪರೀಕ್ಷೆಗೆ ಕೊಟ್ಟ ನೋಂದಣಿ ಸಂಖ್ಯೆ ಮೇಲೆ ಫಲಿತಾಂಶ ಸಿಗುತ್ತಿತ್ತು. ಈ ಬಾರಿ ಪರೀಕ್ಷೆಯಾಗದೆ ರಿಜಿಸ್ಟರ್ ನಂಬರ್ ಸಿಕ್ಕಿಲ್ಲ. ಹೀಗಾಗಿ, ಫಲಿತಾಂಶ ಸಲುವಾಗಿ ವಿದ್ಯಾರ್ಥಿಗಳಿಗೆ ಹೊಸದಾಗಿ ರಿಜಿಸ್ಟರ್ ನಂಬರ್ ಜನರೇಟ್ ಮಾಡುವ ವ್ಯವಸ್ಥೆ ಮಾಡಲಾಗಿದೆ. Know my number ಆಯ್ಕೆಯನ್ನು ಪಿಯು ವೆಬ್​ಸೈಟ್​ ಮೂಲಕ ವಿದ್ಯಾರ್ಥಿಗಳು ಪರಿಶೀಲಿಸಬಹುದು. 4.30ರ ಸುಮಾರಿಗೆ ಅಧಿಕೃತವಾಗಿ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ.

ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಅನ್ನು ಖಚಿತಪಡಿಸಿಕೊಳ್ಳುವ ಮೂಲಕ https://karresults.nic.in ವೆಬ್​ಸೈಟ್​ನಲ್ಲಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು. ಇದಲ್ಲದೆ ವಿದ್ಯಾರ್ಥಿಗಳಿಗೆ ಎಸ್‌ಎಂಎಸ್ ಮೂಲಕ ದ್ವಿತೀಯ ಪಿಯುಸಿಯ ಫಲಿತಾಂಶ ಲಭ್ಯವಾಗಲಿದೆ .

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img