Friday, July 23, 2021
Homeಸುದ್ದಿ ಜಾಲನಟ ದರ್ಶನ್‌ಗೆ 5 ವರ್ಷ ನಿಷೇಧ ಹೇರಲು ಫಿಲ್ಮ್‌ ಛೇಂಬರ್‌ಗೆ ಮನವಿ

ಇದೀಗ ಬಂದ ಸುದ್ದಿ

ನಟ ದರ್ಶನ್‌ಗೆ 5 ವರ್ಷ ನಿಷೇಧ ಹೇರಲು ಫಿಲ್ಮ್‌ ಛೇಂಬರ್‌ಗೆ ಮನವಿ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ ನಟ ದರ್ಶನ್ ಅವರ ವಿರುದ್ಧ ಸಾಲಕ್ಕೆ ಶ್ಯೂರಿಟಿ ಪ್ರಕರಣ ಹಾಗು ಚಿತ್ರನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ಆರೋಪ-ಪ್ರತ್ಯಾರೋಪಗಳು ಕನ್ನಡ ಚಿತ್ರರಂಗದಲ್ಲಿ ಬೇಸರ ಮೂಡಿಸಿದೆ.

ಈ ಕುರಿತಾಗಿ ಇಂದು ಮಾನವ ಹಕ್ಕುಗಳು ಮತ್ತು ಭ್ರಷ್ಟಚಾರ ನಿಗ್ರಹದಳ ಸಂಸ್ಥೆಯ ಅಧ್ಯಕ್ಷ ಮೋಹನ್ ಅವರ ನಿಯೋಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ನಟನಿಗೆ ಐದು ವರ್ಷಗಳ ಕಾಲ ನಿಷೇಧ ಹೇರುವಂತೆ ಆಗ್ರಹಿಸಿ ಸೂಕ್ತ ಕ್ರಮಕ್ಕೆ ದೂರು ನೀಡಿದರು.

ದರ್ಶನ್ ಮಾತಿಗೆ ಕಡಿವಾಣ ಹಾಕಬೇಕು. ಅವರ ಅಸಭ್ಯ ವರ್ತನೆ ಕನ್ನಡ ಚಿತ್ರರಂಗವನ್ನು ಹಾಳು ಮಾಡುತ್ತಿದೆ. ನಾಡಿನ ಯುವ ಸಮೂಹವನ್ನು ದಿಕ್ಕು ತಪ್ಪಿಸುವ ಅವರು ಕೊಲೆಗಡುಕರಾಗಲು ಪ್ರೇರೇಪಣೆ ನೀಡುತ್ತಿದ್ದಾರೆ ಎಂದು ಸಲ್ಲಿಸಲಾದ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಸಮಾಜದ ಮೇಲೆ ದುಷ್ಪರಿಣಾಮ ಬೀರುವಂತೆ ಅಸಭ್ಯವಾಗಿ ಮಾಧ್ಯಮದ ಮುಂದೆ ಸಾರ್ವಜನಿಕವಾಗಿ ನಡೆದುಕೊಳ್ಳುತ್ತಿರುವ ದರ್ಶನ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಣೇಶ್ ಇಬ್ಬರನ್ನೂ ಚಲನಚಿತ್ರ ರಂಗದಿಂದ ಬಹಿಷ್ಕರಿಸಬೇಕು. ಅವರು ಯಾವುದೇ ರೀತಿಯ ಸಿನಿಮಾ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img