Friday, July 30, 2021
Homeಸುದ್ದಿ ಜಾಲಮಳೆಗಾಲದಲ್ಲಿ ಡೆಂಗ್ಯೂ ಜ್ವರ ಬರಬಹುದು ಎಚ್ಚರ..!

ಇದೀಗ ಬಂದ ಸುದ್ದಿ

ಮಳೆಗಾಲದಲ್ಲಿ ಡೆಂಗ್ಯೂ ಜ್ವರ ಬರಬಹುದು ಎಚ್ಚರ..!

ಡೆಂಗ್ಯೂ ಜ್ವರವು ವೈರಸ್ನಿಂದ ಉಂಟಾಗುವ ಸೊಳ್ಳೆ ಹರಡುವ ರೋಗ . ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕು ಆದ ನಂತರ ಮೂರು ಅಥವಾ ಹದಿನಾಲ್ಕು ದಿನಗಳಲ್ಲಿ ಲಕ್ಷಣ ತೋರುವುದು . ಇದರ ಲಕ್ಷಣ , ಹೆಚ್ಚಿನ ಜ್ವರ , ತಲೆನೋವು , ವಾಂತಿ , ಸ್ನಾಯು ಮತ್ತು ಸಂಧಿ ನೋವು , ಮತ್ತು ವಿಶಿಷ್ಟ ಚರ್ಮದ ಗುಳ್ಳೆಗಳ ಅಥವಾ ದಡಸಲು / ದದ್ದುಗಳನ್ನು ಒಳಗೊಂಡಿರಬಹುದು . ಗುಣಮುಖವಾಗಲು ಸಾಮಾನ್ಯವಾಗಿ ಕಡಿಮೆ ಎಂದರೆ ಎರಡು ರಿಂದ ಏಳು ದಿನಗಳ ಕಾಲ ತೆಗೆದುಕೊಳ್ಳುತ್ತದೆ . ಅಪರೂಪದ ಸಂದರ್ಭಗಳಲ್ಲಿ ಈ ಒಂದು ಸಣ್ಣ ಪ್ರಮಾಣದ ರೋಗವು ಮಾರಣಾಂತಿಕವಾದ ಡೆಂಗಿ ಹೆಮರಾಜಿಕ್ ಜ್ವರವಾಗಿ (dengue hemorrhagic fever) ಪರಿಣಮಿಸಬಹುದು .

ಡೆಂಗಿ ಈಡಿಸ್ ಎಂಬ ಸೊಳ್ಳೆಗಳಿಂದ ಹರಡುವ ಸೋಂಕು. ಹೂವಿನ ಕುಂಡ, ಬೀಸಾಕಿದ ಟೈರ್, ಹಳೆಯ ಎಣ್ಣೆಯ ಡ್ರಮ್, ನೀರು ಸಂಗ್ರಹಿಸುವ ತೊಟ್ಟಿ ಇವುಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಆದ್ದರಿಂದಲೇ ಮಳೆಗಾಲದಲ್ಲಿ ಸೋಂಕು ಹೆಚ್ಚಾಗಿ ಹರಡುತ್ತವೆ. ಆದ್ದರಿಂದ ಇವುಗಳನ್ನು ಶುಚಿಗೊಳಿಸಿ ಸೊಳ್ಳೆ ಮೊಟ್ಟೆ ಇಡಲು ಅವಕಾಶವಿರದಂತೆ ನೋಡಿಕೊಳ್ಳಬೇಕು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img