Friday, July 23, 2021
Homeಕೊಪ್ಪಳ.ಕಳ್ಳತನವಾದ ಕೆಲವೇ ಗಂಟೆಗಳಲ್ಲಿ ಮನೆ ಕಳ್ಳನ ಬಂಧನ..

ಇದೀಗ ಬಂದ ಸುದ್ದಿ

ಕಳ್ಳತನವಾದ ಕೆಲವೇ ಗಂಟೆಗಳಲ್ಲಿ ಮನೆ ಕಳ್ಳನ ಬಂಧನ..

ಕೊಪ್ಪಳ: ದಿನಾಂಕ 18-07-2021 ರಂದು ಶ್ರೀಮತಿ ಜ್ಯೋತಿ ಗಂಡ ಶಿವರಾಜ ಭಜಂತ್ರಿ
ಸಾ: ಬೀಳಗಿ ಜಿ:ಬಾಗಲಕೋಟ್ ಹಾ:ವ: ಕಿನ್ನಾಳ ರಸ್ತೆ, 3 ನೇ ಕ್ರಾಸ್ ಕಲ್ಯಾಣನಗರ ಕೊಪ್ಪಳ ಇವರು 08-07-2021 ರಿಂದ 17-07-2021 ನಡುವಿನ ಅವಧಿಯಲ್ಲಿ ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗಿದ್ದ ಸಮಯದಲ್ಲಿ ಯಾರೋ ಕಳ್ಳರು ತಮ್ಮ ಮನೆಯಲ್ಲಿಟ್ಟಿದ್ದ ನಗದು ಹಣ ರೂ: 3,30,000 ಮತ್ತು 127 ಗ್ರಾಂ ತೂಕದ ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ದೂರಿನ ಮೇರೆಗೆ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನದ ಪ್ರಕರಣ ದಾಖಲಾಗಿತ್ತು.

ಸದರಿ ಪ್ರಕರಣದಲ್ಲಿ ಮನೆಗೆ ಹಾಕಿದ ಬೀಗ ಮುರಿಯದೇ ಹಾಗೂ ಅಲಮಾರಾದ ಬೀಗ ಮುರಿಯದೇ ಕಳ್ಳತನವಾಗಿದ್ದರಿಂದ ಈ ಮನೆಯ ಕುಟುಂಬಸ್ಥರ ಪೈಕಿ ಮತ್ತು ಅವರ ಸಂಬಂಧಿಕರು ಯರಾದರೂ ಕಳ್ಳತನ ಮಾಡಿರಬಹುದೆಂಬ ಸಂಶಯದ ಮೇಲಿಂದ ತನಿಖೆ ಮಾಡುವ ವೇಳೆಯಲ್ಲಿ ಫಿಲ್ಯಾದಿದಾರರಾದ ಶ್ರೀಮತಿ ಜ್ಯೋತಿ ಇವರ ಗಂಡನು ತನ್ನ ಮನೆಯಲ್ಲಿದ್ದ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಆ ಪ್ರಕಾರ ಸದರಿಯವನಿಂದ
132 ಗ್ರಾಂ ತೂಕದ ಬಂಗಾರ, ರೂ: 6,60,000=00 ಬೆಲೆ ಬಾಳುವ ಬಂಗಾರದ ಆಭರಣಗಳು ಮತ್ತು ರೂ: 2,80,000=00 ನಗದು ಹಣ ಹೀಗೆ ಒಟ್ಟು ರೂ: 9,40,000=00 ಬೆಲೆ ಬಾಳುವ ಮಾಲನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಪ್ರಕರಣವನ್ನು ಭೇದಿಸುವಲ್ಲಿ ಶ್ರೀ. ಟಿ. ಶ್ರೀಧರ ಐ.ಪಿ.ಎಸ್., ಜಿಲ್ಲಾ ಪೊಲೀಸ್ ಅಧೀಕ್ಷಕರು, ಶ್ರೀಮತಿ ಗೀತಾ ಬೆನಹಾಳ, ಡಿ.ಎಸ್.ಪಿ.ಕೊಪ್ಪಳರವರ ಮಾರ್ಗದರ್ಶನದಲ್ಲಿ ಕೊಪ್ಪಳ ನಗರ ಪೊಲೀಸ್ ಠಾಣೆಯ ಪೊಲೀಸ್
ಇನ್ಸಪೆಕ್ಟರಾದ ಶ್ರೀ, ಮಾರುತಿ ಗುಳ್ಳಾರಿ, ಪಿ.ಎಸ್.ಐ ಗಳಾದ ಶ್ರೀ. ನಾಗಪ್ಪ ಹೆಚ್. ಶ್ರೀ ಮಹಾಂತಪ್ಪ ಮತ್ತು ಸಿಬ್ಬಂದಿಯವರಾದ ಖಾಜಾಸಾಬ, ದೇವೇಂದ್ರಪ್ಪ, ಹನುಮಂತಪ್ಪ, ಶರಣಪ್ಪ, ಸುಭಾಸ ಸಜ್ಜನ್, ಜಗದೀಶ, ಸಿದ್ದರಾಮೇಶ, ಆನಂದ, ಬಸವರಾಜ ಇವರುಗಳು ಶ್ರಮಿಸಿದ್ದು, ಸದರಿಯವರು ಕಾರ್ಯಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳರವರು ಪ್ರಶಂಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img