Friday, July 30, 2021
Homeಜಿಲ್ಲೆಬೆಂಗಳೂರುಕಾವೇರಿಗೆ ಶಾಸಕರು - ಸಚಿವರ ಭೇಟಿ

ಇದೀಗ ಬಂದ ಸುದ್ದಿ

ಕಾವೇರಿಗೆ ಶಾಸಕರು – ಸಚಿವರ ಭೇಟಿ

ಬೆಂಗಳೂರು: ನಾಯಕತ್ವ ಬದಲಾವಣೆ ವದಂತಿ ಬೆನ್ನಲ್ಲೇ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿಗೆ ಶಾಸಕರು ಹಾಗೂ ಸಚಿವರು ಸರಣಿಯಾಗಿ ಆಗಮಿಸುತ್ತಿದ್ದಾರೆ. ನೂತನ ಸಿಎಂ ರೇಸ್​ನಲ್ಲಿ ಹೆಸರು ಕೇಳಿಬರುತ್ತಿದ್ದ ಮುರುಗೇಶ್ ನಿರಾಣಿ ಸಹ ಬಿಎಸ್​ವೈ ಅವರನ್ನು ಭೇಟಿಯಾಗಿದ್ದಾರೆ. ಇದರ ಜೊತೆಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸೋಮಣ್ಣ ಮತ್ತು ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಅಮೃತ ದೇಸಾಯಿ, ಸೋಮಶೇಖರ್ ರೆಡ್ಡಿ, ಡಿಸಿಎಂ ಗೋವಿಂದ ಕಾರಜೋಳ ಸಿಎಂ ಭೇಟಿಯಾಗಿದ್ದಾರೆ.

ನಾಯಕರು ಸಿಎಂ ಭೇಟಿ ನಂತರ ಯಾವುದೇ ಪ್ರತಿಕ್ರಿಯೆ ನೀಡದೇ ತೆರಳುತ್ತಿದ್ದಾರೆ. ಸಿಎಂ ನಗುಮುಖದಲ್ಲೇ ಎಲ್ಲರನ್ನು ಸ್ವಾಗತಿಸಿ, ಕುಶಲೋಪರಿ ವಿಚಾರಿಸುತ್ತಿದ್ದಾರೆ.

ಇಂದು ವಸತಿ ಸಚಿವ ವಿ.ಸೋಮಣ್ಣ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಳ ನಿವಾಸದಲ್ಲಿ ಭೇಟಿ ಮಾಡಿದರು. ಬಿಎಸ್​ವೈ ಸೋಮಣ್ಣನವರನ್ನು ಅಭಿನಂದಿಸಿ, ಹುಟ್ಟುಹಬ್ಬದ ಶುಭಾಶಯ ತಿಳಿಸಿದರು. ಈ ವೇಳೆ ಡಾ.ನವೀನ್, ದಾಸೇಗೌಡ ಜೊತೆಯಲ್ಲಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img