Sunday, August 1, 2021
Homeಜಿಲ್ಲೆಮಂಡ್ಯ1.25 ಲಕ್ಷ ರೂ.ಗೆ ಬಂಡೂರು ತಳಿಯ 2 ಟಗರು ಮಾರಾಟ!

ಇದೀಗ ಬಂದ ಸುದ್ದಿ

1.25 ಲಕ್ಷ ರೂ.ಗೆ ಬಂಡೂರು ತಳಿಯ 2 ಟಗರು ಮಾರಾಟ!

ಮಂಡ್ಯ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಟಗರು, ಕುರಿಗಳ ವ್ಯಾಪಾರ ಜೋರಾಗಿದೆ. ಮಂಡ್ಯದಲ್ಲಿ ಗ್ರಾಹಕರೊಬ್ಬರು ಬರೋಬ್ಬರಿ 1.25 ಲಕ್ಷ ರೂ.ಗೆ ಎರಡು ಬಂಡೂರು ತಳಿಯ ಟಗರು ಖರೀದಿಸಿ, ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಮಂಡ್ಯ ತಾಲೂಕಿನ ಸೂನಗನಹಳ್ಳಿ ಗ್ರಾಮದ ರೈತ ಶಂಭು ಎಂಬುವವರು ಸಾಕಿದ್ದ ಜೋಡಿ ಟಗರುಗಳು ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಕಳೆದ ಒಂದು ವರ್ಷದಿಂದ ಸಾಕಿದ್ದ ಟಗರುಗಳನ್ನು ಮಂಡ್ಯದ ಹಾಲಹಳ್ಳಿ ಬಡಾವಣೆಯ ಸಾಬುದ್ದೀನ್ ಎಂಬುವವರು 1 ಲಕ್ಷದ 25 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಟಗರುಗಳು ತಲಾ 80 ಕೆಜಿ ತೂಕದ್ದಾಗಿವೆ.

ಕಳೆದ ಒಂದು ವರ್ಷದ ಹಿಂದೆ ತಲಾ 25 ಸಾವಿರ ರೂ. ನೀಡಿ ಟಗರುಗಳನ್ನ ಖರೀದಿಸಿದ್ದ ಶಂಭು ಅವರಿಗೆ ಇದೀಗ ಒಳ್ಳೆಯ ಲಾಭ ಸಿಕ್ಕಿದೆ. ಸಾಬುದ್ದೀನ್ ಟಗರುಗಳನ್ನ ಕೊಂಡೊಯ್ಯುವಾಗ ಕೇಕ್ ಕಟ್ ಮಾಡಿ, ರೈತನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img