Friday, July 23, 2021
Homeಜಿಲ್ಲೆಬೆಂಗಳೂರುಇಂದಿನ 'SSLC ಪರೀಕ್ಷೆ' 2,992 ವಿದ್ಯಾರ್ಥಿಗಳು ಗೈರು

ಇದೀಗ ಬಂದ ಸುದ್ದಿ

ಇಂದಿನ ‘SSLC ಪರೀಕ್ಷೆ’ 2,992 ವಿದ್ಯಾರ್ಥಿಗಳು ಗೈರು

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ನಡುವೆಯೂ ಸುರಕ್ಷಾ ಕೇಂದ್ರಗಳಲ್ಲಿ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆದಿದೆ. ಇಂತಹ ಪರೀಕ್ಷೆಗೆ ನೋಂದಾಯಿಸಿಕೊಂಡಂತ 8,75,508 ವಿದ್ಯಾರ್ಥಿಗಳಲ್ಲಿ ಕೇವಲ 2,992 ವಿದ್ಯಾರ್ಥಿಗಳು ಮಾತ್ರವೇ ಗೈರು ಹಾಜರಾಗಿದ್ದಾರೆ. ಶೇ.99.64ರಷ್ಟು ವಿದ್ಯಾರ್ಥಿಗಳು ಈ ಬಾರಿಯ ಪರೀಕ್ಷೆಯಲ್ಲಿ ಹಾಜರಾಗಿದ್ದಾರೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಈ ಬಾರಿ ಕೋವಿಡ್ ಪಾಸಿಟಿವ್ ಇದ್ದೂ ಪರೀಕ್ಷೆ ಬರೆದಂತ ವಿದ್ಯಾರ್ಥಿಗಳ ಸಂಖ್ಯೆ 58 ಆಗಿದೆ. ಇವರಲ್ಲಿ ಬೆಂಗಳೂರು ಉತ್ತರ ಜಿಲ್ಲೆಯಿಂದ ಒಬ್ಬರು, ಬೆಂಗಳೂರು ದಕ್ಷಿಣ ಇಬ್ಬರು, ಮೈಸೂರು ಒಬ್ಬರು, ಮಂಡ್ಯದಲ್ಲಿ ನಾಲ್ವರು, ಉಡುಪಿಯಲ್ಲಿ ಮೂವರು, ಮಂಗಳೂರಿನಲ್ಲಿ 16 ವಿದ್ಯಾರ್ಥಿಗಳು, ಕೊಡಗು ಜಿಲ್ಲೆಯಲ್ಲಿ ಐವರು, ಚಿತ್ರದುರ್ಗದಲ್ಲಿ 7, ಚಿಕ್ಕಮಗಳೂರು 7, ಶಿವಮೊಗ್ಗ 1, ಹಾಸನ 3, ಗದಗ 1, ಬೆಳಗಾವಿ 2, ಉತ್ತರ ಕನ್ನಡ 5, ಕಲಬುರ್ಗಿ 1, ಕೊಪ್ಪಳ 1 ಸೇರಿದಂತೆ ಒಟ್ಟು 58 ವಿದ್ಯಾರ್ಥಿಗಳು ಕೊರೋನಾ ಪಾಸಿಟಿವ್ ಇದ್ದರೂ ಪರೀಕ್ಷೆಯನ್ನು ಕೋವಿಡ್ ಕೇರ್ ಸೆಂಟರ್ ನಲ್ಲಿ ಪರೀಕ್ಷೆ ಬರೆದಿದ್ದಾರೆ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img