Friday, July 30, 2021
Homeಸುದ್ದಿ ಜಾಲಮೇಕೆದಾಟು ಬಗ್ಗೆ ಕೇಂದ್ರದಿಂದ ಭರವಸೆ ಸಿಕ್ಕಿದೆ:ಸ್ಟಾಲಿನ್​

ಇದೀಗ ಬಂದ ಸುದ್ದಿ

ಮೇಕೆದಾಟು ಬಗ್ಗೆ ಕೇಂದ್ರದಿಂದ ಭರವಸೆ ಸಿಕ್ಕಿದೆ:ಸ್ಟಾಲಿನ್​

ನವದೆಹಲಿ: ಕಳೆದ ಕೆಲವು ದಿನಗಳಿಂದ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರದ ಮಧ್ಯೆ ಮೇಕೆದಾಟು ಯೋಜನೆ ವಿಚಾರವಾಗಿ ಗುದ್ದಾಟ ನಡೆಯುತ್ತಿದೆ. ಈ ಸಮರ ಈಗ ಕೇಂದ್ರ ಸರ್ಕಾರದ ಅಂಗಳ ತಲುಪಿದೆ.

ಇಂದು ಕೂಡ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರನ್ನು ಭೇಟಿ ಮಾಡಿರುವ ಸ್ಟಾಲಿನ್​, ಕರ್ನಾಟಕದ ಮೇಕೆದಾಟು ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಮೇಕೆದಾಟು ಯೋಜನೆ ವಿಚಾರವಾಗಿ ನಾವು ಕರ್ನಾಟಕದ ಜೊತೆ ಯಾವುದೇ ರೀತಿಯ ಮಾತುಕತೆ ನಡೆಸುವುದಿಲ್ಲ. ಅದಕ್ಕೆ ಮಹತ್ವ ಕೂಡ ಇಲ್ಲ ಎಂದರು.

ಈ ಯೋಜನೆ ಮುಂದುವರೆಸಲು ಕರ್ನಾಟಕಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್​ ಅವರಿಂದ ಭರವಸೆ ಸಿಕ್ಕಿದೆ. ಈ ಪ್ರಕರಣ ಸದ್ಯ ಸುಪ್ರೀಂಕೋರ್ಟ್​ನಲ್ಲಿದೆ. ನಾವು ಸಮಸ್ಯೆಯನ್ನು ಕಾನೂನಿನ ಮೂಲಕ ಎದುರಿಸುತ್ತೇವೆ ಎಂದು ಹೇಳಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img