Friday, July 23, 2021
Homeಸುದ್ದಿ ಜಾಲವಿರೋಧಿ ಬಣಕ್ಕೆ ಮತ್ತೆ ಖಡಕ್ ಸಂದೇಶ ರವಾನಿಸಿದ ಸಿಎಂ

ಇದೀಗ ಬಂದ ಸುದ್ದಿ

ವಿರೋಧಿ ಬಣಕ್ಕೆ ಮತ್ತೆ ಖಡಕ್ ಸಂದೇಶ ರವಾನಿಸಿದ ಸಿಎಂ

ಬೆಂಗಳೂರು: ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ವಿರೋಧಿ ಬಣಕ್ಕೆ ಖಡಕ್ ಸಂದೇಶ ರವಾನಿಸಿರುವ ಸಿಎಂ ಬಿ.ಎಸ್. ಯಡಿಯೂರಪ್ಪ, ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಇಲಾಖೆಯ ನಿಗಮಕ್ಕೆ ತಮ್ಮ ಆಪ್ತನನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಕಾ.ಪು. ಸಿದ್ದಲಿಂಗ ಸ್ವಾಮಿ ಅವರನ್ನು ನೇಮಕ ಮಾಡಿದ್ದಾರೆ. ಈ ಮೂಲಕ ನಾಯಕತ್ವ ಬದಲಾವಣೆ ಇಲ್ಲ ಎಂಬ ಸಂದೇಶ ರವಾನಿಸಲು ಸಿಎಂ ಯತ್ನಿಸಿದ್ದಾರೆ ಎನ್ನಲಾಗಿದೆ.

ಬದಲಾವಣೆ ಕಿಡಿ ಹೊತ್ತಿಸಿದ್ದ ವಿರೋಧಿಗಳಿಗೆ ಯಡಿಯೂರಪ್ಪ ಈ ಮೂಲಕ ಟಕ್ಕರ್ ನೀಡಿದ್ದಾರೆ ಎನ್ನಲಾಗಿದೆ. ನೇಮಕಾತಿ ಬೆನ್ನಲ್ಲೇ ಪ್ರವಾಸೋಧ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾ.ಪು. ಸಿದ್ಧಲಿಂಗ ಸ್ವಾಮಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img