Thursday, July 29, 2021
Homeದೆಹಲಿಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

ಇದೀಗ ಬಂದ ಸುದ್ದಿ

ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ

ನವದೆಹಲಿ, : ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ದೇಶದಲ್ಲಿನ ಸಮಸ್ಯೆಗಳಾದ ಇಂಧನ ಬೆಲೆ ಏರಿಕೆ, ಕೊರೊನಾ ನಿರ್ವಹಣೆ, ರೈತರ ಪ್ರತಿಭಟನೆ, ಲಸಿಕೆಯ ಕೊರತೆಯಂಥ ವಿಚಾರಗಳನ್ನು ಚರ್ಚೆ ಮಾಡುವ ಸಾಧ್ಯತೆಯಿದೆ.

ಜುಲೈ 19ರಿಂದ 17ನೇ ಲೋಕಸಭೆಯ ಮುಂಗಾರು ಅಧಿವೇಶನ ಆರಂಭಗೊಳ್ಳಲಿದ್ದು, ಆಗಸ್ಟ್‌ 13ರಂದು ಮುಕ್ತಾಯವಾಗಲಿದೆ . ಈ ಬಾರಿ 17 ಹೊಸ ವಿಧೇಯಕಗಳನ್ನು ಮಂಡಿಸಿ, ಅನುಮೋದನೆ ಪಡೆಯಲು ಸರಕಾರ ಉದ್ದೇಶಿಸಿದೆ. ಹೊಸ ವಿಧೇಯಕಗಳ ಪೈಕಿ ಮೂರು ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾದ ವಿಧೇಯಕಗಳಾಗಿದ್ದು, 6 ವಾರಗಳೊಳಗೆ ಸದನದ ಅನುಮೋದನೆ ಪಡೆಯಬೇಕಿದೆ.

ಸಾಮಾಜಿಕ ಅಂತರ ಸೇರಿ ಎಲ್ಲ ಮುನ್ನೆಚ್ಚರಿಕೆ ಕ್ರಮ ಪಾಲಿಸಲು ವ್ಯವಸ್ಥೆ ಮಾಡಲಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಏಕಕಾಲಕ್ಕೆ ಕಲಾಪ ನಡೆಯಲಿದ್ದು, 19 ಕಲಾಪಗಳು ನಡೆಯಲಿವೆ. ಬೆಳಗ್ಗೆ 11ರಿಂದ ಸಂಜೆ 6ರವರೆಗೆ ಕಲಾಪಗಳು ನಡೆಯಲಿದ್ದು, ಆಗಸ್ಟ್‌ 13ರಂದು ಅಧಿವೇಶನ ಮುಗಿಯಲಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img