Friday, July 23, 2021
Homeಜಿಲ್ಲೆಬೆಳಗಾವಿಸಿಎಂ ರೇಸ್​ನಲ್ಲಿ ನೆಕ್ಸ್ಟ್​ ನಾನೇ-ಉಮೇಶ್​ ಕತ್ತಿ

ಇದೀಗ ಬಂದ ಸುದ್ದಿ

ಸಿಎಂ ರೇಸ್​ನಲ್ಲಿ ನೆಕ್ಸ್ಟ್​ ನಾನೇ-ಉಮೇಶ್​ ಕತ್ತಿ

ಬೆಳಗಾವಿ: ಸಿಎಂ ಬದಲಾವಣೆ ಮಾಡಿದ್ರೆ ನೆಕ್ಸ್ಟ್ ಕ್ಯಾಂಡಿಡೇಟ್ ನಾನೇ ಎಂದು ಆಹಾರ ಸಚಿವ ಉಮೇಶ ಕತ್ತಿ ಹೇಳಿದರು.

ನಗರದಲ್ಲಿಂದು ಮಾಧ್ಯಮಗಳ ಎದುರು ಮಾತನಾಡಿದ ಅವರು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕರೆದ ಸಂಘಟನಾತ್ಮಕ ಸಭೆಗೆ ಬಂದಿದ್ದೇನೆ. ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಸಿಎಂ ಇದ್ದಾರೆ, ಒಳ್ಳೆಯ ಸರ್ಕಾರ ನಡೀತಿದೆ. ಕಳೆದ ವರ್ಷದಿಂದ ಸಿಎಂ ಬದಲಾವಣೆ ಕೂಗು ಇದ್ದೇ ಇದೆ. ಅದು ಯಾರು ಬದಲಾಯಿಸುತ್ತಿದ್ದಾರೋ ನನ್ನ ಗಮನಕ್ಕೆ ಬಂದಿಲ್ಲ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.

ಸಿಎಂ ಹುದ್ದೆ ಖಾಲಿ ಇಲ್ಲ, ಖಾಲಿ ಆದಾಗ ಆ ಬಗ್ಗೆ ವಿಚಾರ ಮಾಡ್ತೀನಿ,ಈಗ ಸಿಎಂ ಸ್ಥಾನ ಬದಲಾವಣೆ ಆದ್ರೆ ಉತ್ತರ ಕರ್ನಾಟಕಕ್ಕೆ ಕೊಡಬೇಕೆಂಬುದು ನಮ್ಮ ವಾದ. ಯಾರೇ ಸಿಎಂ ಆದರೂ ಅಖಂಡ ರಾಜ್ಯ ಆಳುವ ಸಿಎಂ ಇರಬೇಕು. ಸಿಎಂ ಹುದ್ದೆ ಖಾಲಿ ಆದ್ರೆ ನೆಕ್ಸ್ಟ್ ನಾನೇ ಇದೀನಿ. ಸಿಎಂ ಸ್ಥಾನ ಬದಲಾವಣೆ ಆದ್ರೆ ನಂದೇ ನಂಬರ್ ಇದೆ. ಪೀರಿಡ್‌ವೈಸ್, ಕಳಂಕರಹಿತ ಎಲ್ಕಾ ಅರ್ಹತೆ ಇರುವ ನಾನೇ ಕ್ಯಾಂಡಿಡೇಟ್ . ನಸೀಬ್ ಗಟ್ಟಿ ಇದ್ರೆ, ಹೈಕಮಾಂಡ್ ನಿರ್ಣಯ ಮಾಡಿದ್ರೆ ನಾನೇ ಸಿಎಂ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದೀನಿ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img