Sunday, August 1, 2021
Homeಸುದ್ದಿ ಜಾಲನಳಿನ್ ಕುಮಾರ್​ ಕಟೀಲ್​​ ದೆಹಲಿ ಪ್ರವಾಸ ಮುಂದೂಡಿಕೆ

ಇದೀಗ ಬಂದ ಸುದ್ದಿ

ನಳಿನ್ ಕುಮಾರ್​ ಕಟೀಲ್​​ ದೆಹಲಿ ಪ್ರವಾಸ ಮುಂದೂಡಿಕೆ

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅವರು ದೆಹಲಿ ಅಧಿವೇಶನದಲ್ಲಿ ಭಾಗವಹಿಸುವ ಪ್ರವಾಸವನ್ನು ಇಂದು ರದ್ದುಗೊಳಿಸಿದ್ದು, ನಾಳೆ ಹೊರಡಲಿದ್ದಾರೆ. ಪ್ರವಾಸ ಮುಂದೂಡಿರುವ ಕಾರಣದ ಹಿಂದೆ ದೆ ಆಡಿಯೋ ವೈರಲ್ ಕಾರಣವಾಗಿದೆಯೇ ಎಂಬ ಅನುಮಾನಗಳು ಕಂಡು ಬರುತ್ತಿವೆ.

ದೆಹಲಿಯಲ್ಲಿ ನಡೆಯುವ ಅಧಿವೇಶನದಲ್ಲಿ ಪಾಲ್ಗೊಳ್ಳಲು ಇಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅವರು ಹೊರಡಬೇಕಿತ್ತು. ಆದರೆ, ಏಕಾಏಕಿ ಪ್ರಯಾಣ ರದ್ದು ಗೊಳಿಸಿ, ನಾಳೆಗೆ ಮುಂದೂಡಿದ್ದಾರೆ. ಈ ನಡೆಯಿಂದ ಕುತೂಹಲ ಗರಿಗೆದರಿದೆ. ಇದಕ್ಕೆ ಆಡಿಯೋ ವೈರಲ್ ಕಾರಣವೇ ಎಂಬ ಸಂಶಯ ಸುಳಿದಾಡುತ್ತಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img