Friday, July 30, 2021
Homeದಕ್ಷಿಣ ಕನ್ನಡಮಂಗಳೂರುನಳಿನ್ ಕುಮಾರ್‌ ಕಟೀಲ್​ ಸ್ಫೋಟಕ ಆಡಿಯೋ ವೈರಲ್..?

ಇದೀಗ ಬಂದ ಸುದ್ದಿ

ನಳಿನ್ ಕುಮಾರ್‌ ಕಟೀಲ್​ ಸ್ಫೋಟಕ ಆಡಿಯೋ ವೈರಲ್..?

ಮಂಗಳೂರು: ಹಿರಿಯ ಬಿಜೆಪಿ ನಾಯಕರುಗಳಾದ ಜಗದೀಶ್‌ ಶೆಟ್ಟರ್‌, ಈಶ್ವರಪ್ಪ ಟೀಂ ಸಂಪುಟದಿಂದ ಖಾಯಂ ಆಗಿ ಹೊರಬೀಳಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಅವರದ್ದೆನ್ನಲಾದ ಆಡಿಯೋವೊಂದು ವೈರಲ್ ಆಗಿದೆ.

ಈ ಮೂಲಕ ರಾಜ್ಯ ರಾಜಕಾರಣಕ್ಕೆ ರೋಚಕ ಟ್ವಿಸ್ಟ್‌ ದೊರೆತಿದೆ. ನಳಿನ್ ಕುಮಾರ್ ಅವರು ತಮ್ಮ ಆಪ್ತರೊಬ್ಬರ ಬಳಿ ನಡೆಸಿದ್ದಾರೆ ಎನ್ನಲಾದ ಆಡಿಯೋ ಸಂದೇಶ ವೈರಲ್ ಆಗಿದೆ. ಈ ಮಾತುಕತೆಯಲ್ಲಿ, ಯಡಿಯೂರಪ್ಪ ಅವರ ಪದಚ್ಯುತಿಯ ಸುಳಿವು ಕೂಡಾ ದೊರೆತಿದೆ.

ತುಳುವಿನಲ್ಲಿ ನಡೆಸಿರುವ ಈ ಸಂಭಾಷಣೆಯಲ್ಲಿ, “ಯಾರಿಗೂ ಹೇಳೋದು ಬೇಡ ಈಶ್ವರಪ್ಪ, ಜಗದೀಶ್ ಶೆಟ್ಟರ್ ಆ ತಂಡವನ್ನೇ ತೆಗೆದು ಹಾಕಲಾಗುತ್ತದೆ. ಹೊಸ ತಂಡ ರಚಿಸಲಾಗುತ್ತದೆ. ಏನೂ ಹೆದರಬೇಡಿ, ನಾವಿದ್ದೇವೆ. ಏನಾದರೂ, ಎಲ್ಲಾ ಇನ್ನೂ ನಮ್ಮ ಕೈಯಲ್ಲಿದೆ. ಮೂರು ಹೆಸರಿದೆ, ಯಾವುದೂ ಆಗಲೂ ಸಾಧ್ಯವಿದೆ. ಇಲ್ಲ ಇಲ್ಲಿಯವರನ್ನು(ಕರಾವಳಿ) ಯಾರನ್ನೂ ಮಾಡೋಲ್ಲ. ಡೆಲ್ಲಿಯಿಂದಲೇ ಹಾಕುತ್ತಾರೆ.” ಎಂದು ನಳಿನ್ ಕುಮಾರ್ ಕಟೀಲ್ ಅವರೇ ಮಾತನಾಡಿದ್ದೆನ್ನಲಾದ ತುಳು ಆಡಿಯೋ ವೈರಲ್ ಆಗಿದೆ.

ಈ ಮೂಲಕ ಸಂಭಾಷಣೆಯಲ್ಲಿ, ಸಿಎಂ ಬದಲಾವಣೆ ಕುರಿತು ಸೂಚ್ಯವಾಗಿ ಹೇಳಿದಂತಿದೆ. ಇದರಿಂದ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳು ಘಟಿಸಲಿವೆಯೇ ಎಂಬ ಕುತೂಹಲ ಸೃಷ್ಟಿಯಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img