Thursday, July 29, 2021
Homeಸುದ್ದಿ ಜಾಲಲಂಕಾ ವಿರುದ್ಧ ಮೊದಲ ಏಕದಿನ ಸರಣಿಯಲ್ಲಿ ಗೆದ್ದ ಇಂಡಿಯಾ

ಇದೀಗ ಬಂದ ಸುದ್ದಿ

ಲಂಕಾ ವಿರುದ್ಧ ಮೊದಲ ಏಕದಿನ ಸರಣಿಯಲ್ಲಿ ಗೆದ್ದ ಇಂಡಿಯಾ

ಕೊಲಂಬೊ: ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ – ಭಾರತ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಶುಭಾರಂಭ ಮಾಡಿದೆ.

ಶಿಖರ್ ಧವನ್ ನೇತೃತ್ವದ ಭಾರತ ತಂಡ ಶ್ರೀಲಂಕಾ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1 -0 ಅಂತರದ ಮುನ್ನಡೆ ಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 262 ರನ್ ಕಲೆಹಾಕಿತು. ಭಾರತದ ಪರವಾಗಿ ದೀಪಕ್ ಚಾಹರ್ 2, ಹಾರ್ದಿಕ್ ಪಾಂಡ್ಯ 1, ಯಜುವೇಂದ್ರ ಚಾಹಲ್ 2, ಕುಲದೀಪ್ ಯಾದವ್ 2, ಕೃಣಾಲ್ ಪಾಂಡ್ಯ 1 ವಿಕೆಟ್ ಪಡೆದರು.

262 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಭಾರತ 36.4 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿ ಗೆಲುವು ಸಾಧಿಸಿದ್ದಾರೆ. ಶಿಖರ್ ಧವನ್ ಅಜೇಯ 86, ಪೃಥ್ವಿ ಶಾ 43, ಇಶಾನ್ ಕಿಶನ್ 59, ಮನೀಶ್ ಪಾಂಡೆ 26, ಸೂರ್ಯಕುಮಾರ್ ಅಜೇಯ 31 ರನ್ ಗಳಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img