Friday, July 23, 2021
Homeಸುದ್ದಿ ಜಾಲದೇವನಹಳ್ಳಿಯಲ್ಲಿ ನಿರಂತರ ಮಳೆ..!

ಇದೀಗ ಬಂದ ಸುದ್ದಿ

ದೇವನಹಳ್ಳಿಯಲ್ಲಿ ನಿರಂತರ ಮಳೆ..!

ದೇವನಹಳ್ಳಿ : ಕಳೆದ ನಾಲ್ಕು ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ರೈಲ್ವೆ ಅಂಡರ್ ಪಾಸ್​ನಲ್ಲಿ ನೀರು ತುಂಬಿದೆ. ಪರಿಣಾಮ, ನೀರಿನಲ್ಲಿ ಸಿಲುಕಿದ ವಾಹನಗಳನ್ನ ಎಳೆಯಲು ಜನ ಹರಸಾಹಸ ಪಟ್ಟಿದ್ದಾರೆ.

ತಾಲೂಕಿನ ಇರೀಗೇನಹಳ್ಳಿ ಗ್ರಾಮದ ಬಳಿಯ ರೈಲ್ವೆ ಅಂಡರ್ ಪಾಸ್​ನಲ್ಲಿ ಈ ಘಟನೆ ನಡೆದಿದೆ. ಹಾಲು ತುಂಬಿದ ಲಾರಿ, ಟ್ರ್ಯಾಕ್ಟರ್ ಸೇರಿದಂತೆ ಹಲವು ವಾಹನಗಳು ಸಿಲುಕಿದ್ದವು. ನೀರಿನಲ್ಲಿ ಸಿಲುಕಿ ಕೆಟ್ಟು ನಿಂತ ವಾಹನಗಳನ್ನ ಜೆಸಿಬಿ ಮೂಲಕ ಎಳೆದು ಮೇಲಕ್ಕೆ ತರಲಾಯಿತು.

ರೈಲ್ವೆ ಅಂಡರ್​ ಪಾಸ್ ಹತ್ತಾರು ಹಳ್ಳಿಗಳಿಗೆ ಸಂಪರ್ಕಿಸುವ ರಸ್ತೆಯಾಗಿದೆ. ಅವೈಜ್ಞಾನಿಕವಾಗಿ ಇದನ್ನು ನಿರ್ಮಾಣ ಮಾಡಿರುವುದೇ ಮಳೆ ನೀರು ತುಂಬಲು ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img