Friday, July 23, 2021
Homeಜಿಲ್ಲೆಬೆಂಗಳೂರುಆಡಿಯೋ ನಳಿನ್ ಕುಮಾರ್ ಅವರದ್ದೇ : ಡಿಕೆಶಿ

ಇದೀಗ ಬಂದ ಸುದ್ದಿ

ಆಡಿಯೋ ನಳಿನ್ ಕುಮಾರ್ ಅವರದ್ದೇ : ಡಿಕೆಶಿ

ಬೆಂಗಳೂರು : ಯಾರೋ ಸಾಮಾನ್ಯರ ಆಡಿಯೋ ಅಲ್ಲ. ಈ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಹೇಳಿದರು.

ರಾಜಾಜಿನಗರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಲ್ಲಾ ರಾಜ್ಯಗಳ ಕಾಂಗ್ರೆಸ್​ ಅಧ್ಯಕ್ಷರ ಜೊತೆ ರಾಹುಲ್ ಗಾಂಧಿ ಚರ್ಚೆ ಮಾಡಲಿದ್ದಾರೆ. ನಮ್ಮನ್ನ ಕೂಡ ಕರೆದಿದ್ದಾರೆ. ಮಾರ್ಗದರ್ಶನ ಪಡೆಯಲು ಹೋಗುತ್ತಿದ್ದೇನೆ.

ಪದಾಧಿಕಾರಿಗಳ ನೇಮಕ ಕುರಿತು ಚರ್ಚೆ ಆಗುತ್ತೆ. ಮುಂದಿನ ವಾರ ರಾಜ್ಯ ಉಸ್ತುವಾರಿ ಐದು ದಿನಗಳ ರಾಜ್ಯ ಪ್ರವಾಸ ಮಾಡ್ತಾರೆ. ಅವರು ಬಂದು ಹೋದ ಬಳಿಕ ಪಟ್ಟಿ ಅಂತಿಮವಾಗುತ್ತೆ. ನಾನು ಈಗಾಗಲೇ ಪಟ್ಟಿ ನೀಡಿದ್ದೇನೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಡಿಯೋ ವಿಚಾರವಾಗಿ ಮಾತನಾಡಿದ ಅವರು, ಯಾರೋ ಸಾಮಾನ್ಯರ ಆಡಿಯೋ ಅಲ್ಲ. ಈ ಆಡಿಯೋ ನಳಿನ್ ಕುಮಾರ್ ಕಟೀಲ್ ಅವರದ್ದೇ.. ಅವರ ಪಕ್ಷದ ಬೆಳವಣಿಗೆಯ ಬಗ್ಗೆ ಮಾತನಾಡಿದ್ದಾರೆ.ಇದು ತನಿಖೆಗೆ ಕೊಡಬೇಕು ಅಂತಾರೆ. ತನಿಖೆಗೆ ಅಧಿಕಾರಿಯನ್ನು ನೇಮಕ ಮಾಡ್ತಾರೆ. ಆ ಅಧಿಕಾರಿ ಇದನ್ನ ಫೇಕ್ ಅಂತಾರೆ. ಈ ಹಿಂದೆ ಯಡಿಯೂರಪ್ಪ ಅವರ ಆಡಿಯೋ ವಿಚಾರ ಏನಾಯ್ತು? ನಾವಂತೂ ಈ ಪ್ರಕರಣದಲ್ಲಿ ಇಲ್ಲ ಎಂದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img