Sunday, August 1, 2021
Homeಸುದ್ದಿ ಜಾಲಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿ ನಟಿ ಶೃತಿ ನೇಮಕ

ಇದೀಗ ಬಂದ ಸುದ್ದಿ

ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾಗಿ ನಟಿ ಶೃತಿ ನೇಮಕ

ಸಚಿವ ಸಿ.ಪಿ. ಯೋಗೇಶ್ವರ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಪ್ರವಾಸೋದ್ಯಮ ನಿಗಮದಿಂದ ಪದಚ್ಯುತಿಗೊಂಡ ಒಂದೇ ದಿನದಲ್ಲಿ ನಟಿ ಶ್ರುತಿ ಮದ್ಯಪಾನ ಸಂಯಮ ಮಂಡಳಿಗೆ ನೇಮಕಗೊಂಡಿದ್ದಾರೆ.

ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಶ್ರುತಿ ಅವರನ್ನು ಭಾನುವಾರ ದಿಢೀರನೆ ಪ್ರವಾಸೋದ್ಯಮ ನಿಗಮದಿಂದ ವಜಾ ಮಾಡಲಾಗಿತ್ತು. ಸಚಿವ ಸಿ.ಪಿ.ಯೋಗೇಶ್ವರ್ ಭಾನುವಾರ ಏಕಾಏಕಿ ಈ ನಿರ್ಧಾರ ಕೈಗೊಂಡಿದ್ದರಿಂದ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರನ್ನು ಶ್ರುತಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಮಾತುಕತೆ ವೇಳೆ ಯಡಿಯೂರಪ್ಪ ಬೇರೆ ಜವಾಬ್ದಾರಿ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಸೋಮವಾರ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img