Friday, July 30, 2021
Homeಜಿಲ್ಲೆಬೆಂಗಳೂರುನಟ ದರ್ಶನ್ ಹಿಂಬಾಲಕರಿಂದ ನನಗೆ ಬೆದರಿಕೆ : ಇಂದ್ರಜಿತ್

ಇದೀಗ ಬಂದ ಸುದ್ದಿ

ನಟ ದರ್ಶನ್ ಹಿಂಬಾಲಕರಿಂದ ನನಗೆ ಬೆದರಿಕೆ : ಇಂದ್ರಜಿತ್

ಬೆಂಗಳೂರು : ನಟ ದರ್ಶನ್ ವಿರುದ್ಧ ಮಾತನಾಡಿದ್ದರಿಂದಾಗಿ, ಅವರ ಅಭಿಮಾನಿಗಳು ನನಗೆ ಕ್ಷಣ ಕ್ಷಣಕ್ಕೂ ಪೋನ್, ಮೆಸೇಜ್ ಮಾಡಿ ಬೆದರಿಕೆ ಹಾಕ್ತಾ ಇದ್ದಾರೆ. ಹೀಗೆ 10 ಸೆಕೆಂಡ್, 20, 30 ಸೆಕೆಂಡ್ ಗೆ ಒಮ್ಮೆ ಕಾಲ್ ಅನಾಮಕಿ ನಂಬರ್ ಗಳಿಂದ ಕರೆ ಬರ್ತಾ ಇದ್ದಾವೆ. ಪೋನ್ ರಿಸೀವ್ ಮಾಡಿದ್ರೇ ಮಾತನಾಡುತ್ತಿಲ್ಲ. ಬರೀ ಕಾಲ್ ಮಾಡುತ್ತಿದ್ದಾರೆ. ಜೊತೆಗೆ ವಾಟ್ಸಾಪ್ ಮೂಲಕವೂ ಅಶ್ಲೀಲ ಸಂದೇಶ, ಪೋಟೋ ಕಳಿಸಿ ತೊಂದರೆ ಕೊಡ್ತಾ ಇದ್ದಾರೆ. ಈ ಹಿನ್ನಲೆಯಲ್ಲಿ ಸೈಬರ್ ಕ್ರೈಂ ಪೊಲೀಸರು ದೂರು ನೀಡುತ್ತಿರೋದಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಈ ಕುರಿತಂತೆ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಪ್ರತಿ ಸೆಕೆಂಡ್ ಸೆಕೆಂಡ್ ಗೂ ನನಗೆ ನಟ ದರ್ಶನ್ ವಿರುದ್ಧ ಮಾತನಾಡಿದ್ದಕ್ಕೆ, ವಾಟ್ಸಾಪ್ ಮೆಸೇಜ್, ಪೋಟೋ, ಕಾಲ್ ಮಾಡೋ ಮೂಲಕ ದರ್ಶನ್ ಹಿಂಭಾಲಕರು, ರೌಡಿಗಳು ನನಗೆ ಬೆದರಿಕೆ ಹಾಕ್ತಾ ಇದೆ. ಸೆಕೆಂಡ್ ಸೆಕೆಂಡ್ ಗೂ ಕರೆ ಮಾಡ್ತಾರೆ. ಕಾಲ್ ರಿಸೀವ್ ಮಾಡಿದ್ರೆ ಮಾತನಾಡುತ್ತಿಲ್ಲ. ವೀಡಿಯೋ ಕಾಲ್ ಸೇರಿದಂತೆ ಸಂದೇಶ ಕೂಡ ಕಳಿಸಿ ಬೆದರಿಕೆ ಹಾಕ್ತಾ ಇದ್ದಾರೆ. ಈ ಎಲ್ಲಾ ದಾಖಲೆಗಳನ್ನು ನಟ ದರ್ಶನ್ ಹಿಂಬಾಲಕೇ ಮಾಡುತ್ತಿದ್ದಾರೆ. ಹೀಗಾಗಿ ನಾನು ಆ ಬಗ್ಗೆ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದೇನೆ. ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುತ್ತಿರೋದಾಗಿ ತಿಳಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img