Friday, July 30, 2021
Homeಸುದ್ದಿ ಜಾಲವೈದ್ಯನನ್ನು ಬಲಿ ಪಡೆದ ಚೀನಾದ ಮಂಕಿ ವೈರಸ್

ಇದೀಗ ಬಂದ ಸುದ್ದಿ

ವೈದ್ಯನನ್ನು ಬಲಿ ಪಡೆದ ಚೀನಾದ ಮಂಕಿ ವೈರಸ್

ಕರೊನಾ ತವರು ಚೀನಾದಿಂದ ಇದೀಗ ಮಂಕಿ ಬಿ ವೈರಸ್​ ಪತ್ತೆಯಾಗಿದೆ. ಮಾರ್ಚ್ ಆರಂಭದಲ್ಲಿ ಮೃತಪಟ್ಟ ಎರಡು ಕೋತಿಗಳನ್ನು ಅಧ್ಯಯನ ನಡೆಸಿದ್ದ ಬೀಜಿಂಗ್ ಮೂಲದ 53 ವರ್ಷದ ಪಶುವೈದ್ಯ ಈ ಸೋಂಕಿಗೆ ಬಲಿಯಾಗಿದ್ದಾರೆ.

1992ರಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದ ಈ ಸೋಂಕು ಮತ್ತೆ ಕಾಣಿಸಿಕೊಂಡಿದ್ದು, ಇದೀಗ ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿದೆ. ಹಳೆಯ ಕೋತಿಗಳ ಕುಲದಿಂದ ಈ ಸೋಂಕು ಹರಡುವುದು ಸ್ಪಷ್ಟವಾಗಿದೆ. ಅದರಲ್ಲಿಯೂ ಮಕಾಕ್, ಚಿಂಪಾಂಜಿ ಮತ್ತು ಕ್ಯಾಪುಚಿನ್ ಜಾತಿಯ ಕೋತಿಗಳಲ್ಲಿ ಈ ಸೋಂಕು ಪತ್ತೆಯಾಗಿವೆ. ಮಂಕಿ ವೈರಸ್​ ಅನ್ನು ಹರ್ಪಿಸ್ ಬಿ, ಮಂಕಿ ಬಿ ವೈರಸ್, ಹರ್ಪಿಸ್ ವೈರಸ್ ಸಿಮಿಯ ಮತ್ತು ಹರ್ಪಿಸ್ ವೈರಸ್ ಬಿ ಎಂದೂ ಕರೆಯುತ್ತಾರೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ, ಈ ಸೋಂಕು ಮನುಷ್ಯರಿಗೆ ಅಂಟಿಕೊಳ್ಳುವುದು ತೀರಾ ವಿರಳ. 1932ರಲ್ಲಿ ಮೊದಲ ಬಾರಿಗೆ ವ್ಯಕ್ತಿಯೊಬ್ಬರಿಗೆ ಇದು ಕಾಣಿಸಿಕೊಂಡಿತ್ತು. ಇವರೆಗೆ 50 ಮಂದಿಯಲ್ಲಿ ಇದು ಕಾಣಿಸಿಕೊಂಡಿದ್ದು 21 ಮಂದಿ ಮೃತಪಟ್ಟಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img