Friday, July 30, 2021
Homeಸುದ್ದಿ ಜಾಲಕಾರವಾರದಲ್ಲಿ ಬಲೆಗೆ ಬಿದ್ದ ಕುರುಡೆ ಮೀನು

ಇದೀಗ ಬಂದ ಸುದ್ದಿ

ಕಾರವಾರದಲ್ಲಿ ಬಲೆಗೆ ಬಿದ್ದ ಕುರುಡೆ ಮೀನು

ಕಾರವಾರ: ಅಪರೂಪದ ಬೃಹತ್ ಗಾತ್ರದ ಕುರುಡೆ ಮೀನು ಎಂಡಿ ಬಲೆಗೆ ಬಿದ್ದಿರುವ ಘಟನೆ ಕಾರವಾರ ನಗರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಕಂಡುಬಂದಿದೆ. ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಭಾರೀ ಮಳೆ ಸುರಿಯುತ್ತಿದೆ. ಈ ಅವಧಿಯಲ್ಲಿ ಸಮುದ್ರದಲ್ಲಿ ಭಾರೀ ಗಾತ್ರದ ಅಲೆಗಳು ಸೃಷ್ಟಿಯಾಗುತ್ತಿದ್ದರಿಂದ ಕೆಲ ದಿನಗಳಿಂದ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಆದರೆ ಸೋಮವಾರ ಮಳೆ ಕೊಂಚ ಕಡಿಮೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಮೀನುಗಾರರು ಸಾಂಪ್ರದಾಯಿಕ ಪದ್ಧತಿಯಲ್ಲಿ ಮೀನು ಹಿಡಿಯಲು ಮುಂದಾದಾಗ 19 ಕೆ.ಜಿ ತೂಕದ ಕುರುಡೆ ಮೀನು ಸಿಕ್ಕಿದೆ. ಭಾರಿ ಮಳೆಯಾದ ಹಿನ್ನೆಲೆ ಆಹಾರ ಹುಡುಕುತ್ತಾ ದಡದ ಕಡೆ ಬಂದಾಗ ಬಲೆಗೆ ಬಿದ್ದಿದ್ದೆ ಎನ್ನಲಾಗಿದೆ.

ದೊಡ್ಡ ಮೀನು ಬಲೆಗೆ ಬಿದ್ದ ಹಿನ್ನೆಲೆ ಮೀನುಗಾರರು ಫುಲ್ ಖುಷಿಯಾಗಿದ್ದಾರೆ. ಈ ಮೀನನ್ನು ಕೆ.ಜಿಗೆ 600 ರೂ. ಮೊತ್ತದಂತೆ ಒಟ್ಟು 8 ಸಾವಿರ ರೂ. ನೀಡಿ ಖರೀದಿ ಮಾಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img