Friday, July 30, 2021
Homeಸುದ್ದಿ ಜಾಲಮಧ್ಯಪ್ರದೇಶದಲ್ಲಿ ತರಬೇತಿ ವಿಮಾನ ಅಪಘಾತ

ಇದೀಗ ಬಂದ ಸುದ್ದಿ

ಮಧ್ಯಪ್ರದೇಶದಲ್ಲಿ ತರಬೇತಿ ವಿಮಾನ ಅಪಘಾತ

ಸಾಗರ್ (ಮಧ್ಯಪ್ರದೇಶ): ಜಿಲ್ಲೆಯ ಧನಾ ಏರ್‌ಸ್ಟ್ರಿಪ್‌ನಲ್ಲಿ ತರಬೇತಿ ಪೈಲಟ್​ ಚಾಲನೆ ಮಾಡುತ್ತಿದ್ದ ಲಘು ವಿಮಾನವೊಂದು ಶನಿವಾರ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್​​ ಪೈಲಟ್​ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಚೈಮ್ಸ್​ ಏವಿಯೇಷನ್​ಗೆ ಸೇರಿದ ಸೆಸ್ನಾ 172 ಹೆಸರಿನ ವಿಮಾನವು ಅಪಘಾತಕ್ಕೀಡಾದ ವಿಮಾನವಾಗಿದೆ.

ಕಳೆದ ವರ್ಷ ಇದೇ ಸಂಸ್ಥೆಯ ವಿಮಾನವು ಅಪಘಾತವಾಗಿ ಇಬ್ಬರು ಮೃತಪಟ್ಟಿದ್ದರು. ನಂತರ ಇಲ್ಲಿಂದ 20 ಕಿಲೋ ಮೀಟರ್​ ದೂರದಲ್ಲಿರುವ ಏರ್​ಸ್ಟ್ರಿಪ್​ ಬಳಸುವುದನ್ನು ನಿಷೇಧಿಸಲಾಗಿತ್ತು. ಆದರೆ, ಕೆಲ ದಿನಗಳ ಹಿಂದಷ್ಟೇ ಆ ನಿರ್ಬಂಧವನ್ನು ತೆಗೆದುಹಾಕಿ ಇಲ್ಲಿ ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಶನಿವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು, 22 ವರ್ಷದ ಟ್ರೈನಿಂಗ್​​ ಪೈಲಟ್​​​ ಸುರಕ್ಷಿತ ಎಂದು ಸ್ಥಳೀಯ ಆಡಳಿತಾಧಿಕಾರಿ ರಾಹುಲ್ ಶರ್ಮಾ ತಿಳಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img