Sunday, August 1, 2021
Homeಸುದ್ದಿ ಜಾಲಇಂದು ಬಹುಭಾಷಾ ನಟಿ ಸೌಂದರ್ಯ ಜನ್ಮದಿನ

ಇದೀಗ ಬಂದ ಸುದ್ದಿ

ಇಂದು ಬಹುಭಾಷಾ ನಟಿ ಸೌಂದರ್ಯ ಜನ್ಮದಿನ

2004 ಏಪ್ರಿಲ್ 17ರಂದು ವಿಮಾನ ಅಪಘಾತದಲ್ಲಿ ನಿಧನರಾದ ಬಹುಭಾಷಾ ನಟಿ ಸೌಂದರ್ಯ ಜನ್ಮದಿನವಿಂದು. ಸೌಂದರ್ಯ 1992ರಲ್ಲಿ ‘ಗಂದರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸೌಂದರ್ಯ ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದಿ, ತಮಿಳು, ಮಲಯಾಳಂ, ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 12 ವರ್ಷ ಸಿನಿಮಾರಂಗದಲ್ಲಿ ಹಲವಾರು ಸಾಧನೆ ಮಾಡಿದ್ದಾರೆ.

ನಟಿ ಸೌಂದರ್ಯ ಕನ್ನಡ, ತೆಲುಗು ಹಾಗೂ ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ ಸೌಂದರ್ಯ 1972 ಜುಲೈ 18ರಂದು ಕೋಲಾರದ ಮುಳಬಾಗಿಲಿನಲ್ಲಿ ಜನಿಸಿದರು. ಇಂದು ಹಲವಾರು ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಸೌಂದರ್ಯ ಅವರನ್ನು ಸ್ಮರಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img