Friday, July 23, 2021
Homeಜಿಲ್ಲೆಮೈಸೂರುರಾಜ್ಯಾದ್ಯಂತ ವರುಣಾರ್ಭಟ : ಮಳೆಗೆ ಧರೆಗುರುಳಿದ ಮರ

ಇದೀಗ ಬಂದ ಸುದ್ದಿ

ರಾಜ್ಯಾದ್ಯಂತ ವರುಣಾರ್ಭಟ : ಮಳೆಗೆ ಧರೆಗುರುಳಿದ ಮರ

ಕೊಪ್ಪಳ/ಮೈಸೂರು : ರಾಜ್ಯದಲ್ಲಿ ಹಲವೆಡೆ ಸುರಿಯುತ್ತಿರುವ ವರುಣ ಕೆಲವೆಡೆ ಅವಾಂತರ ಸೃಷ್ಟಿಸಿದ್ದಾನೆ. ಕೊಪ್ಪಳದಲ್ಲಿ ಬ್ಯಾರೇಜ್ ಒಡೆದು ಹೋಗಿದ್ದು, ಮೈಸೂರಿನಲ್ಲಿ ವಿದ್ಯುತ್ ಕಂಬ ಹಾಗೂ ಮರ ಧರೆಗುರುಳಿವೆ.

ನಿನ್ನೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು ಕೊಪ್ಪಳ ತಾಲೂಕಿನ ಡೊಂಬ್ರಳ್ಳಿ ಗ್ರಾಮದ ಬಳಿಯ ಬ್ಯಾರೇಜ್​ನ ಒಂದು ಭಾಗ ಒಡೆದು ಹೋಗಿದೆ. ಡೊಂಬ್ರಳ್ಳಿ ಹಾಗೂ ಗೊಂಡಬಾಳ‌ ನಡುವೆ ಇರುವ ಹಿರೇಹಳ್ಳದಲ್ಲಿ ಈ ಬ್ಯಾರೇಜ್ ನಿರ್ಮಿಸಲಾಗಿದೆ. ನೀರಿನ ರಭಸಕ್ಕೆ ಬ್ಯಾರೇಜ್​ನ ಒಂದು ಭಾಗ ಒಡೆದು ಹೋಗಿದ್ದು, ರೈತರ ಹೊಲಕ್ಕೆ ನೀರು ನುಗ್ಗಿದೆ.

ಮೈಸೂರು ಜಿಲ್ಲೆಯಲ್ಲಿಯೂ ಮಳೆಯ ಅಬ್ಬರ ಜೋರಾಗಿದೆ. ಮಳೆಗೆ ವಿದ್ಯುತ್ ಕಂಬ ಹಾಗೂ ಮರ ರಸ್ತೆ ಮಧ್ಯೆದಲ್ಲಿಯೇ ಉರುಳಿ ಬಿದ್ದಿವೆ. ಮೈಸೂರಿನ ಜಿಲ್ಲಾ ವರಿಷ್ಠಾಧಿಕಾರಿ ನಿವಾಸದ ಸಮೀಪವೇ ಈ ಘಟನೆ ನಡೆದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img