Sunday, August 1, 2021
Homeಜಿಲ್ಲೆಬೆಂಗಳೂರುಸಿದ್ದರಾಮಯ್ಯ ಭೇಟಿಯಾದ ರಕ್ಷಾ ರಾಮಯ್ಯ

ಇದೀಗ ಬಂದ ಸುದ್ದಿ

ಸಿದ್ದರಾಮಯ್ಯ ಭೇಟಿಯಾದ ರಕ್ಷಾ ರಾಮಯ್ಯ

ಬೆಂಗಳೂರು : ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಕ್ಷಾ ರಾಮಯ್ಯ ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮುಂದಿನ ಮೂರು ವರ್ಷಕ್ಕಿದ್ದ ತಮ್ಮ ಅಧ್ಯಕ್ಷೀಯ ಅವಧಿಯನ್ನು ಪಕ್ಷದ ಹೈಕಮಾಂಡ್ ಒಂದು ವರ್ಷಕ್ಕೆ ಮೊಟಕುಗೊಳಿಸಿದ ಹಿನ್ನೆಲೆ ತೀವ್ರ ಬೇಸರಿಸಿಕೊಂಡಿರುವ ರಕ್ಷಾ ರಾಮಯ್ಯ, ಈ ವಿಚಾರವನ್ನು ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.

ಮುಂದಿನ ಮೂರು ವರ್ಷಗಳ ಅವಧಿಗೆ ರಕ್ಷಾ ರಾಮಯ್ಯ ಅವರನ್ನು ಯುವ ಕಾಂಗ್ರೆಸ್ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದ ಹೈಕಮಾಂಡ್, ಈಗ ಏಕಾಏಕಿ ಒಂದು ವರ್ಷಕ್ಕೆ ಸೀಮಿತಗೊಳಿಸಿ ಉಳಿದ ಎರಡು ವರ್ಷದ ಕಾಲಾವಧಿಯನ್ನು ಮೊಹಮ್ಮದ್ ನಲಪಾಡ್​ಗೆ ನೀಡಿದೆ. 69 ಸಾವಿರ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದ ಮೊಹಮ್ಮದ್ ನಲಪಾಡ್ ಆಯ್ಕೆಯನ್ನು ಅನರ್ಹಗೊಳಿಸಿದ ಪಕ್ಷದ ಹೈಕಮಾಂಡ್, 2ನೇ ಅತಿಹೆಚ್ಚು ಮತಗಳನ್ನು ಪಡೆದಿದ್ದ ರಕ್ಷಾ ರಾಮಯ್ಯ ಅವರನ್ನ ಅಧ್ಯಕ್ಷರೆಂದು ಘೋಷಿಸಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img