Friday, July 30, 2021
Homeಜಿಲ್ಲೆಬೆಂಗಳೂರು'ಐತಿಹಾಸಿಕ' ವಿಮಾನ ಚಲಾಯಿಸಿದ ಸಂಸದ ರಾಜೀವ್ ಪ್ರತಾಪ್ ರೂಡಿ!

ಇದೀಗ ಬಂದ ಸುದ್ದಿ

‘ಐತಿಹಾಸಿಕ’ ವಿಮಾನ ಚಲಾಯಿಸಿದ ಸಂಸದ ರಾಜೀವ್ ಪ್ರತಾಪ್ ರೂಡಿ!

ನವದೆಹಲಿ: ಬಿಜೆಪಿ ಸಂಸದ ಹಾಗೂ ನಾಗರಿಕ ವಿಮಾನಯಾನ ಖಾತೆಯ ಮಾಜಿ ಸಚಿವರೂ ಆಗಿರುವ ರಾಜೀವ್ ಪ್ರತಾಪ್ ರೂಡಿ ಆರು ಮಂದಿ ಬಿಜೆಪಿ ನಾಯಕರಿರುವ ವಿಮಾನವನ್ನು ಚಾಲನೆ ಮಾಡಿದ್ದಾರೆ. ಈ ಕುರಿತ ವಿಡಿಯೋವನ್ನು ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ವಾಣಿಜ್ಯ ವಿಮಾನದ ಪೈಲಟ್ ಕೂಡಾ ಆಗಿರುವ ರಾಜೀವ್ ಪ್ರತಾಪ್ ರೂಡಿ, ನಾಗರಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರನ್ನು ಹೊಂದಿರುವ ಬಿಜೆಪಿ ನಾಯಕರಿದ್ದ ವಿಮಾನವನ್ನು ಚಲಾಯಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಮತ್ತು ಸಂಸದ ಬೇರೆ ಸಚಿವರು ಮತ್ತು ಸಂಸದರಿರುವ ವಿಮಾನವನ್ನು ಚಲಾಯಿಸಿರುವುದು ಅತ್ಯಂತ ಅಪರೂಪ ಘಟನೆಯಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img