Sunday, August 1, 2021
Homeಜಿಲ್ಲೆಬೆಂಗಳೂರುಚಿತ್ರರಂಗ ಬೀದಿ ಚರ್ಚೆ ವಿಷಯವಾಗದಿರಲಿ: ಜಗ್ಗೇಶ್

ಇದೀಗ ಬಂದ ಸುದ್ದಿ

ಚಿತ್ರರಂಗ ಬೀದಿ ಚರ್ಚೆ ವಿಷಯವಾಗದಿರಲಿ: ಜಗ್ಗೇಶ್

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ನಟ ದರ್ಶನ್ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವಿನ ಸಂಘರ್ಷಗಳ ಬೆನ್ನಲ್ಲೇ ಹಿರಿಯ ನಟ ಜಗ್ಗೇಶ್, ಕನ್ನಡ ಚಿತ್ರರಂಗದಲ್ಲಿ ತಾವು ಬೆಳೆದುಬಂದ ಹಾದಿ, ಡಾ. ರಾಜ್ ಕುಮಾರ್ ರಿಂದ ಹಿಡಿದು ನಟ ದರ್ಶನ್ ಜೊತೆಗಿನ ತಮ್ಮ ಒಡನಾಟ ಎಲ್ಲವನ್ನೂ ಅರ್ಥಗರ್ಭಿತವಾಗಿ ಬಿಂಬಿಸುವ ಫೋಟೊಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ತಮ್ಮದೇ ಶೈಲಿಯಲ್ಲಿ ಬುದ್ಧಿವಾದ ಹೇಳಿದ್ದಾರೆ.

ಗುರು ಹಿಂದೆ ಗುರಿ ಮಂದೆ…ಹಠ ಬಿಡಲಿಲ್ಲಾ ಗಾಂಧಿನಗರ ಅಲೆದು ಚಪ್ಪಲಿ ಸವೆಸಿ ದಡಮುಟ್ಟಿದೆ ಎಂದುಬಿಟ್ಟರೆ ಆತ್ಮ ಧ್ರೋಹ ಆಗಿಬಿಡುತ್ತದೆ ಕಾರಣ ದಡಮುಟ್ಟಿಸಿದ್ದು ಅಂದಿನ ನಿರ್ದೇಶಕರು ನಿರ್ಮಾಪಕರು ಮಾಧ್ಯಮಮಿತ್ರರು ಹಾಗೂ ವಿಶೇಷವಾಗಿ ಸ್ವಾಭಿಮಾನಿ ಕನ್ನಡಿಗರು! ಹೇಳಿ ಹೇಗಿದ್ದರಬೇಕು ಅಪಮಾನ ಅವಮಾನ ಹಸಿವಿನಿಂದ ನಿದ್ರೆಗೆಟ್ಟು ಗೆದ್ದ ಒಬ್ಬ ಸಾಮಾನ್ಯನ ಬದುಕು! ಅಂದು ನಮ್ಮ ಬಗ್ಗೆ ಹೇಳಲು ಇದ್ದದ್ದು ಒಂದೆ ಬರಹಮಾಧ್ಯಮ ಮಾತ್ರ. ನೆನಪಿಡಿ ಇಂದು ನೂರಾರು ಮಾಧ್ಯಮ, ಅಂಗೈಯಲ್ಲೆ ಆಕಾಶ ತೋರಿ ಹತ್ತಾರುವರ್ಷ ಸಾಧನೆ ಕ್ಷಣಮಾತ್ರದಲ್ಲೆ ಅನುಮಾನದಿಂದ ಸಾಧಕನ ನೋಡುವಂತ ಮಾಯಾಜಾಲ ಸಾಮಾಜಿಕ ಜಾಲತಾಣ. ಸಿಕ್ಕಸಿಕ್ಕವರ ಕೈಲಿ ಈ ಜಾಲಸಿಕ್ಕು ವಯಸ್ಸು ಸಾಧನೆ ಅವರ ಮೂಗಿನ ನೇರಕ್ಕೆ ಅವರು ಬದುಕಿದ ಪರಿಸರ ಭಾಷೆಬಳಸಿ ಅವಮಾನ ಮಾಡಿ ವಿಕೃತ ಆನಂದ ಅನುಭವಿಸುವುದು ವಿಪರ್ಯಾಸ ದಿನಗಳು! ಇಂದಿನ ಸಾರ್ವಜನಿಕ ಜೀವನ ಪಬ್ಲಿಕ್ ಟಾಯ್ಲೇಟ್ ನಂತೆ ಆಗಿಬಿಟ್ಟಿದೆ! ಆದರು ವಿಧಿಯಿಲ್ಲಾ ಚರ್ಮ ದಪ್ಪಮಾಡಿ ಬದುಕಬೇಕು! ಎಂದಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img