Friday, July 23, 2021
Homeಸಿನಿಮಾ'ಹಲ್ಲೆ ಮಾಡಿಲ್ಲ ಅಂತ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ': ಇಂದ್ರಜಿತ್

ಇದೀಗ ಬಂದ ಸುದ್ದಿ

‘ಹಲ್ಲೆ ಮಾಡಿಲ್ಲ ಅಂತ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ’: ಇಂದ್ರಜಿತ್

ನಟ ದರ್ಶನ್ ಹೋಟೆಲ್​ ಸಪ್ಲೈಯರ್​ ಮೇಲೆ ಹಲ್ಲೆ ನಡೆಸಿದ್ದಾರೆಂಬ ವಿಚಾರವಾಗಿ ಇಂದ್ರಜಿತ್ ಲಂಕೇಶ್ ಹಾಗೂ ಸಂದೇಶ್ ಸ್ವಾಮಿ ಆಡಿಯೋ ಸ್ಯಾಂಡಲ್​ವುಡ್​ನಲ್ಲಿ ಸಂಚಲನ ಸೃಷ್ಟಿಸಿತ್ತು. ಈ ವಿಚಾರವಾಗಿ ಇಂದು ಸುದ್ದಿಗೋಷ್ಠಿ ಕರೆದಿದ್ದ ದರ್ಶನ್,​​ ಇಂದ್ರಜಿತ್​ ವಿರುದ್ಧ ವಾಕ್ಸಮರ ನಡೆಸಿದರು. ಇದರ ಬೆನ್ನಲ್ಲೇ ಇಂದ್ರಜಿತ್ ಲಂಕೇಶ್ ಕೂಡ ಸ್ಪಷ್ಟನೆ ನೀಡಿದ್ದಾರೆ.

ನಾನು ‘ಗೂಂಡಾಗಿರಿ’ ಎಂದಿದ್ದನ್ನು ದರ್ಶನ್​ ಬೇರೆ ರೀತಿ ಅರ್ಥ ಮಾಡಿಕೊಂಡಿದ್ದಾರೆ. ನಾನು ಹೇಳಿದನ್ನು ಅವರು ಸರಿಯಾಗಿ ಓದಿಕೊಂಡಿಲ್ಲ ಅನಿಸುತ್ತೆ. ಅರುಣಾ ಕುಮಾರಿ ಪ್ರಕರಣ ಹಾಗೂ ಹೋಟೆಲ್​ ಸಪ್ಲೈಯರ್​​ ಮೇಲಿನ‌ ಹಲ್ಲೆ ಪ್ರಕರಣಗಳಿಂದ ದರ್ಶನ್​ ವಿಚಲಿತರಾಗಿದ್ದಾರೆಂದು ಆರೋಪಿಸಿದರು.

ನೀವು ಸಪ್ಲೈಯರ್​ನ ಹೊಡೆದ್ರೋ ಇಲ್ಲವೋ, ಬಡ ಹುಡುಗನಿಗೆ ಹೊಡೆದಿದ್ದು ಎಷ್ಟು ಸರಿ. ಅದಕ್ಕೆ ಕ್ಷಮೆ ಕೇಳೋಕೆ ಹೇಳಿದ್ದೆ. ಅರುಣಾ ಕುಮಾರಿಯನ್ನ ನಿಮ್ಮ ತೋಟಕ್ಕೆ ಕರೆಸಿಕೊಂಡಿದ್ರೋ ಇಲ್ಲವೋ.. ಇಲ್ಲ ಅನ್ನುವುದಾದರೆ ಧರ್ಮಸ್ಥಳದಲ್ಲಿ ಆಣೆ ಮಾಡಿ ನೋಡೋಣ ಎಂದು ಇಂದ್ರಜಿತ್ ಲಂಕೇಶ್ ದರ್ಶನ್​ಗೆ ಸವಾಲ್ ಹಾಕಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img