Friday, July 30, 2021
Homeಸುದ್ದಿ ಜಾಲಐ ಲವ್ ಯೂ ಸಿನಿಮಾ ಸಂಗೀತ ನಿರ್ದೇಶಕನ ಮೇಲೆ ಹಲ್ಲೆ

ಇದೀಗ ಬಂದ ಸುದ್ದಿ

ಐ ಲವ್ ಯೂ ಸಿನಿಮಾ ಸಂಗೀತ ನಿರ್ದೇಶಕನ ಮೇಲೆ ಹಲ್ಲೆ

ಬೆಂಗಳೂರು : ಐಲವ್‌ಯೂ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್ ಮೇಲೆ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಭಾನುವಾರ ಬೆಳಗಿನ ಜಾವ 2.30ರ ಸುಮಾರಿಗೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನೆಡೆಸಿದ್ದಾರೆ ಎನ್ನಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾರುತಿ ಸ್ವಿಫ್ಟ್ ಕಾರ್‌ವೊಂದರಲ್ಲಿ ಬಂದು ಮ್ಯೂಸಿಕ್ ಡೈರೆಕ್ಟರ್ ಡಾ. ಕಿರಣ್ ಮೇಲೆ ಐದು ಜನ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. ಆರ್‌ಆರ್‌ನಗರದ ಗೆಳೆಯರ ಮನೆಯಲ್ಲಿ ಉಸಿರು ತಂಡದ ವತಿಯಿಂದ ಸಂಚಾರಿ ವಿಜಯ್ ಬರ್ತ್ ಡೇ ಸೆಲೆಬ್ರೇಷನ್ ಮುಗಿಸಿ ಮ್ಯೂಸಿಕ್ ಡೈರೆಕ್ಟರ್ ವಾಪಸಾಗುತ್ತಿದ್ದ ಸಮಯದಲ್ಲಿ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.

ಫಾಲೋ‌ ಮಾಡಿ ರಾಡ್‌ನಿಂದ ಅಟ್ಯಾಕ್ ಮಾಡಿದ್ದು, ಡಾ. ಕಿರಣ್‌ರ ತಲೆಯ ಹಿಂದೆ ಸಣ್ಣ ಗಾಯಗಳಾಗಿವೆ. ಈ ಸಂಬಂಧ ಆರ್‌ಆರ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img