Friday, July 23, 2021
Homeಸುದ್ದಿ ಜಾಲಪಶ್ಚಿಮ ಕರಾವಳಿಯಲ್ಲಿ ಜುಲೈ 23ರ ವರೆಗೆ ಭಾರಿ ಮಳೆ

ಇದೀಗ ಬಂದ ಸುದ್ದಿ

ಪಶ್ಚಿಮ ಕರಾವಳಿಯಲ್ಲಿ ಜುಲೈ 23ರ ವರೆಗೆ ಭಾರಿ ಮಳೆ

ನವದೆಹಲಿ: ದೇಶದ ಪಶ್ಚಿಮ ಕರಾವಳಿಯಲ್ಲಿ ಜುಲೈ 23ರ ವರೆಗೆ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಉತ್ತರ ಭಾರತದಲ್ಲಿ ಜುಲೈ 21ರ ವರೆಗೆ ಭಾರಿ ಮಳೆಯಾಗಲಿದೆ. ನಂತರ ಮಳೆಯ ತೀವ್ರತೆ ಕಡಿಮೆಯಾಗುವುದು ಎಂದೂ ಐಎಂಡಿ ಹೇಳಿದೆ.

‘ಉತ್ತರ ಪ್ರದೇಶ, ಗುಜರಾತ್‌, ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಪೂರ್ವ ಭಾಗದ ಕೆಲವು ಪ್ರದೇಶಗಳಲ್ಲಿ ಗುಡುಗು-ಸಿಡಿಲಿನೊಂದಿಗೆ ಮಳೆ ಬೀಳುವ ಸಾಧ್ಯತೆಗಳಿವೆ’ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಸೋಮವಾರ (ಜುಲೈ 19) ಉತ್ತರಾಖಂಡ ಹಾಗೂ ಉತ್ತರ ಪ್ರದೇಶದ ವಾಯವ್ಯ ಭಾಗದಲ್ಲಿ ಧಾರಾಕಾರ ಮಳೆ ಬೀಳಲಿದೆ. ಈ ಅವಧಿಯಲ್ಲಿ ಪಶ್ಚಿಮ ಹಾಗೂ ದಕ್ಷಿಣ ಭಾರತದಲ್ಲಿಯೂ ಭಾರಿ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img