Sunday, August 1, 2021
Homeಸುದ್ದಿ ಜಾಲಮುಂಬಡ್ತಿ ನಿರೀಕ್ಷೆಯಲ್ಲಿದ್ದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಿಗ್ ಶಾಕ್

ಇದೀಗ ಬಂದ ಸುದ್ದಿ

ಮುಂಬಡ್ತಿ ನಿರೀಕ್ಷೆಯಲ್ಲಿದ್ದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಿಗ್ ಶಾಕ್

ಬೆಂಗಳೂರು : ಮುಂಬಡ್ತಿ ನಿರೀಕ್ಷೆಯಲ್ಲಿದ್ದ ರಾಜ್ಯದ 80 ಸಾವಿರಕ್ಕೂ ಅಧಿಕ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಿಗ್ ಶಾಕ್ ಎದುರಾಗಿದ್ದು, ಸರ್ಕಾರಿ ಹಿರಿ ಪ್ರಾಥಮಿಕ ಶಾಲೆಗಳಲ್ಲಿ ಬೋಧಿಸುತ್ತಿರುವ ಪದವೀಧರ ಶಿಕ್ಷಕರಿಗೆ ಹಿಂಬಡ್ತಿ ನೀಡಲಾಗಿದೆ.

ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಹಿಂಬಡ್ತಿಯಾಗಿದ್ದು, ಪದವೀಧರ ಶಿಕ್ಷಕರನ್ನು ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪದನಾಮ ಬದಲಿಸಿದ ಕಾರಣದಿಂದ 80 ಸಾವಿರಕ್ಕೂ ಅಧಿಕ ಶಿಕ್ಷಕರಿಗೆ ಅನ್ಯಾಯವಾಗಿದೆ ಎನ್ನಲಾಗಿದೆ.

2016 ಕ್ಕೂ ಮೊದಲು ನೇಮಕಾತಿಗೊಂಡ 1 ರಿಂದ 7 ನೇ ತರಗತಿಗೆ ಪಾಠ ಮಾಡುವ ಪ್ರಾಥಮಿಕ ಶಾಲೆ ಶಿಕ್ಷಕರುಗಳಲ್ಲಿ ಮೂಲ ವೃಂದದ 1.60 ಲಕ್ಷ ಶಿಕ್ಷಕರಲ್ಲಿ 80 ಸಾವಿರಕ್ಕೂ ಅಧಿಕ ಶಿಕ್ಷಕರು ಪದವಿ ವಿದ್ಯಾರ್ಹತೆ ಮತ್ತು 20 ರಿಂದ 25 ವರ್ಷ ಸೇವಾನುಭವ ಹೊಂದಿದ್ದಾರೆ. ಆದರೆ ಸೇವಾನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರನ್ನು ಮುಂಬಡ್ತಿಗೆ ಕಡೆಗಣಿಸಲಾಗಿದ್ದು, 1-5 ನೇ ತರಗತಿ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ವರ್ಗೀಕರಿಸಿರುವುದರಿಂದ ಹಿಂಬಡ್ತಿ ನೀಡಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img