Friday, July 30, 2021
Homeಸುದ್ದಿ ಜಾಲಚೀನಾದಲ್ಲಿ ಮತ್ತೊಂದು ರೋಗ ಪತ್ತೆ..?

ಇದೀಗ ಬಂದ ಸುದ್ದಿ

ಚೀನಾದಲ್ಲಿ ಮತ್ತೊಂದು ರೋಗ ಪತ್ತೆ..?

ಬೀಜಿಂಗ್‌: ಚೀನಾದ ರಾಜಧಾನಿ ಬೀಜಿಂಗ್​ನಲ್ಲಿ ಮನುಷ್ಯನಲ್ಲಿ ಮೊದಲ ಬಾರಿಗೆ ‘ಮಂಕಿ ಬಿ ವೈರಸ್’ ಎಂಬ ಸೋಂಕು ದೃಢಪಟ್ಟಿದೆ. ಪರಿಣಾಮ, ಪಶುವೈದ್ಯರೊಬ್ಬರು ಈ ಸೋಂಕಿಗೆ ಬಲಿಯಾಗಿದ್ದಾರೆ.

ಆದರೆ ಈ ವೈದ್ಯರ ಆಪ್ತ ಸಂಪರ್ಕ ಹೊಂದಿರುವವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಅವರ ಸಂಪರ್ಕಿತರೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಮಾನವರಲ್ಲದ ಸಸ್ತನಿಗಳ ಬಗ್ಗೆ ಸಂಶೋಧನೆ ನಡೆಸುವ ಸಂಸ್ಥೆಯಲ್ಲಿ ಕೆಲಸ ಮಾಡುವ 53 ವರ್ಷದ ಪಶುವೈದ್ಯರೊಬ್ಬರು ವಾಂತಿಯ ಆರಂಭಿಕ ಲಕ್ಷಣಗಳೊಂದಿಗೆ ಸೋಂಕಿಗೆ ಒಳಗಾಗಿದ್ದರು. ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದ ಪಶು ವೈದ್ಯರಿಗೆ ಏಪ್ರಿಲ್​ ತಿಂಗಳಲ್ಲೇ ಸೋಂಕು ತಗುಲಿತ್ತು. ಎರಡು ಮೃತ ಮಂಗಗಳ ಶಸ್ತ್ರಚಿಕಿತ್ಸೆ ಮಾಡಿದ್ದ ಅವರಿಗೆ ಕೆಲವೇ ದಿನಗಳಲ್ಲಿ ವಾಂತಿಯಂತಹ ಪ್ರಾರಂಭಿಕ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದವು.

ಇದರಿಂದ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಮಂಕಿ ಬಿ ವೈರಸ್ ಸೋಂಕು ತಗುಲಿರುವುದು ದೃಢವಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದರೂ, ಅವರು ಮೇ 27ರಂದು ಬಲಿಯಾದರು. ಈ ವಿಚಾರ ಚೀನಾದ ಸಿಡಿಸಿ ಪತ್ರಿಕೆಯಲ್ಲಿ ಜುಲೈ 17ರಂದು ಪ್ರಕಟವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img